ADVERTISEMENT

ಗುಜರಾತಿನ ಮೂರು ಗ್ರಾಮಗಳಲ್ಲಿ ಮದುವೆ ದಿನ ವರನ ತಂಗಿಯನ್ನು ವರಿಸುತ್ತಾಳೆ ವಧು! 

​ಪ್ರಜಾವಾಣಿ ವಾರ್ತೆ
Published 26 ಮೇ 2019, 9:10 IST
Last Updated 26 ಮೇ 2019, 9:10 IST
ಕೃಪೆ: ಎನ್‌ಡಿಟಿವಿ
ಕೃಪೆ: ಎನ್‌ಡಿಟಿವಿ   

ಚೋಟಾ ಉದೇಪುರ್ : ಇಲ್ಲಿನ ಸುರ್‌ಖೇದಾ, ಸನಾದ ಮತ್ತು ಅಂಬಾಲ್ ಎಂಬ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಿಶೇಷವಾದ ಸಂಪ್ರದಾಯವೊಂದಿದೆ.ಇಲ್ಲಿ ನಡೆಯುವ ಮದುವೆಗಳಲ್ಲಿ ಮದುಮಗ ಭಾಗಿಯಾಗುವುದಿಲ್ಲ. ಆತನ ಬದಲುಅವಿವಾಹಿತೆಯಾಗಿರುವಸಹೋದರಿ ಅಥವಾ ಸಂಬಂಧಿಕರ ಹುಡುಗಿಯನ್ನುವಧುವನ್ನುವರಿಸುತ್ತಾಳೆ.

ಈ ಊರಿನ ದೇವರುಗಳ ಅವಿವಾಹಿತರು ಎಂಬ ನಂಬಿಕೆ ಇಲ್ಲಿದೆ. ಈ ಅವಿವಾಹಿತ ದೇವರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಇಲ್ಲಿ ಮದುವೆ ಗಂಡು ತನ್ನ ಮದುವೆಯಲ್ಲಿ ಭಾಗಿಯಾಗುವುದಿಲ್ಲ.ಮದುಮಗನಿಗೆ ಯಾವುದೇ ದೋಷ ತಟ್ಟದಂತೆ ಆತನನ್ನು ಸಿಂಗರಿಸಿ ಮನೆಯಲ್ಲಿಯೇ ಕೂರಿಸಲಾಗುತ್ತದೆ.

ಮದುವೆಯದಿನ ಮದುವೆ ಗಂಡಿನ ಬದಲು ಆತನ ಅವಿವಾಹಿತ ಸೋದರಿ ಸಿಂಗರಿಸಿ, ವಾದ್ಯಘೋಷಗಳಿಂದ ಕೂಡಿದ
ದಿಬ್ಬಣದೊಂದಿಗೆವಧುವಿನ ಮನೆಗೆ ಹೋಗುತ್ತಾಳೆ. ಅಲ್ಲಿ ಆಕೆ ವಧುವನ್ನುವರಿಸಿ ಮನೆಗೆ ಕರೆದುಕೊಂಡು ಬರುತ್ತಾಳೆ.

ADVERTISEMENT

ಮದುವೆಯಲ್ಲಿ ಮದುಮಗ ಮಾಡುವ ಎಲ್ಲ ಕಾರ್ಯಗಳನ್ನು ಆತನ ಸಹೋದರಿಯೇ ನಿರ್ವಹಿಸುತ್ತಾಳೆ. ಮಾಂಗಲ್ಯಧಾರಣೆ, ಸಪ್ತಪದಿ ಎಲ್ಲವೂ ಇಲ್ಲಿ ನಡೆಯುತ್ತದೆ ಅಂತಾರೆ ಸುರ್‌ಖೇದ ಗ್ರಾಮದ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.