ADVERTISEMENT

ಚುನಾಯಿತ ಸರ್ಕಾರದ ಪದಚ್ಯುತಿ ವಿಶ್ವಾಸಘಾತುಕತನ: ಶಿವಸೇನೆ

ಪಿಟಿಐ
Published 20 ಜುಲೈ 2020, 8:22 IST
Last Updated 20 ಜುಲೈ 2020, 8:22 IST
ಶಿವಸೇನಾ
ಶಿವಸೇನಾ   

ಮುಂಬೈ: ಪ್ರಜಾಪ್ರಭುತ್ವದ ಮಾರ್ಗದಲ್ಲಿ ಆಯ್ಕೆಯಾಗಿರುವ ಸರ್ಕಾರವನ್ನು ಹಣ ಬಳಸಿ ಪದಚ್ಯುತಗೊಳಿಸುವುದು ವಿಶ್ವಾಸಘಾತುಕತನ ಹಾಗೂ ಫೋನ್‍ ಕದ್ದಾಲಿಸುವುದು ಒಬ್ಬರ ವ್ಯಕ್ತಿಗತ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಶಿವಸೇನೆಯು ರಾಜಸ್ಥಾನದ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದೆ.

'ಈ ಎರಡರಲ್ಲಿ ಯಾವುದು ದೊಡ್ಡ ಅಪರಾಧ ಎಂಬುದು ತೀರ್ಮಾನವಾಗಬೇಕಿದೆ' ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿನ ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದೆ. ರಾಜಸ್ಥಾನದ ಟೆಲಿಫೋನ್‍ ಕದ್ದಾಲಿಕೆ ಪ್ರಕರಣ ಹಲವರ ಮನಸ್ಥಿತಿಯನ್ನು ಬೆತ್ತಲಾಗಿಸಿದೆ ಎಂದೂ ಟೀಕಿಸಿದೆ.

ಟೆಲಿಫೋನ್‍ ಸಂಭಾಷಣೆಯನ್ನು ಮೌನವಾಗಿ ಕೇಳಿಸಿಕೊಂಡರೆ ಹಾಗೂ ರಾಹುಲ್‍ಗಾಂಧಿ ಅವರನ್ನು ತಲುಪಿರುವ ಮಾತುಗಳನ್ನು ಗಮನಿಸಿದರೆ ಹಲವು ಸಂಗತಿಗಳುತಿಳಿಯುತ್ತವೆ. ರಾಹುಲ್‍ ಗಾಂಧಿ ಅವರು ಸರಿಯಾಗಿ ಕಾರ್ಯನಿರ್ವಹಿಸಲೂ ಕೆಲವರು ಅವಕಾಶ ನೀಡುತ್ತಿಲ್ಲ ಎಂದೂ ಸಂಪಾದಕೀಯದಲ್ಲಿ ಹೇಳಲಾಗಿದೆ.

ADVERTISEMENT

ಟೆಲಿಫೋನ್‍ ಕದ್ದಾಲಿಕೆ ಆರೋಪ ಕುರಿತಂತೆ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರವು ರಾಜಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಶಿವಸೇನೆಯ ಈ ಅಭಿಪ್ರಾಯವು ಗಮನಸೆಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.