ADVERTISEMENT

ಪ್ರತಿಕೂಲ ಹವಾಮಾನ: ನಾಗ್ಪುರದಲ್ಲಿ ಇಳಿದ ಬ್ರಿಟಿಷ್ ಏರ್‌ವೇಸ್‌ ವಿಮಾನ

ಪಿಟಿಐ
Published 25 ಫೆಬ್ರುವರಿ 2026, 0:42 IST
Last Updated 25 ಫೆಬ್ರುವರಿ 2026, 0:42 IST
   

ನಾಗ್ಪುರ : ಲಂಡನ್‌ನಿಂದ ಹೈದರಾಬಾದ್‌ಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ವಿಮಾನವು ಪ್ರತಿಕೂಲ ಹವಾಮಾನದ ಕಾರಣದಿಂದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಳಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಿಮಾನವು ನಾಗ್ಪುರ ನಿಲ್ದಾಣದಲ್ಲಿಯೇ ಇದೆ ಎಂದು ಹೇಳಿದರು.

ಅಸ್ಪಷ್ಟ ಗೋಚರತೆ ಮತ್ತು ಪ್ರತಿಕೂಲ ಹವಾಮಾನದಿಂದ ವಿಮಾನವು ಬೆಳಿಗ್ಗೆ 5.30ಕ್ಕೆ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.