ಬ್ರಿಟನ್ ಯುದ್ಧ ವಿಮಾನ
ತಿರುವನಂತಪುರ: ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ಬಾಕಿಯಾಗಿದ್ದ ಬ್ರಿಟನ್‌ನ ಯುದ್ಧ ವಿಮಾನ ಕೊನೆಗೂ ಒಂದು ತಿಂಗಳ ಬಳಿಕ ಪ್ರಯಾಣ ಬೆಳೆಸಿತು.
ಜೂನ್ 14ರಂದು ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಬ್ರಿಟನ್‌ನ ಎಫ್-35 ಬಿ ಯುದ್ಧ ವಿಮಾನ, ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿತ್ತು.
ಬಳಿಕ ದುರಸ್ತಿ ನಡೆಸಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದರಿಂದ ವಿಮಾನ ಅಲ್ಲೇ ಉಳಿದುಕೊಂಡಿತ್ತು.
ಇಂದು (ಮಂಗಳವಾರ) ಬೆಳಿಗ್ಗೆ 10.50ಕ್ಕೆ ಸರಿಯಾಗಿ ಆಸ್ಟ್ರೇಲಿಯಾದ ಡಾರ್ವಿನ್‌ಗೆ ಯುದ್ಧ ವಿಮಾನ ಪ್ರಯಾಣ ಬೆಳೆಸಿತು ಎಂದು ಮೂಲಗಳು ತಿಳಿಸಿವೆ.
ಬ್ರಿಟನ್ ರಾಯಲ್ ನೇವಿಗೆ ಸೇರಿದ ಎಫ್-35ಬಿ ಯುದ್ಧ ವಿಮಾನ, ಅತ್ಯಂತ ಸುಧಾರಿತ ರಹಸ್ಯ ಕಾರ್ಯಾಚರಣೆಗಳಿಗೆ ಬಳಕೆ ಮಾಡುವ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಇದು 110 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ (ಅಂದಾಜು ₹948 ಕೋಟಿ) ಹೆಚ್ಚು ಬೆಲೆ ಬಾಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.