ADVERTISEMENT

ಗೋವಾ| ಮಡ್‌ ಬಾತ್‌ ನೆಪದಲ್ಲಿ ಬ್ರಿಟಿಷ್‌ ಮಹಿಳೆ ಮೇಲೆ ಅತ್ಯಾಚಾರ: ಆರೋಪಿ ಸೆರೆ

ಏಜೆನ್ಸೀಸ್
Published 7 ಜೂನ್ 2022, 6:03 IST
Last Updated 7 ಜೂನ್ 2022, 6:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪಣಜಿ: ಉತ್ತರ ಗೋವಾದ ಅರಂಬೋಲ್ ಬೀಚ್ ಬಳಿಯ ಪ್ರಸಿದ್ಧ ‘ಸ್ವೀಟ್ ಲೇಕ್‌’ ಬಳಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 32 ವರ್ಷದ ಸ್ಥಳೀಯ ವ್ಯಕ್ತಿಯನ್ನು ಗೋವಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಸ್ಥಳೀಯ ನಿವಾಸಿಯಾಗಿರುವ ಆರೋಪಿ ಜೋಯಲ್ ವಿನ್ಸೆಂಟ್ ಡಿಸೋಜಾ ಜೂನ್ 2ರಂದು ‘ಮಡ್‌ ಬಾತ್‌’ ಸೇವೆ ನೀಡುವ ನೆಪದಲ್ಲಿ 42 ವರ್ಷದ ಬ್ರಿಟಿಷ್ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ’ ಎಂದು ಹೇಳಿದ್ದಾರೆ.

ಮಹಿಳೆ ಪತಿಯೊಂದಿಗೆ ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಘಟನೆ ಜೂನ್‌ 2ರಂದೇ ನಡೆದಿತ್ತಾದರೂ, ಸೋಮವಾರ (ಜೂನ್‌ 6) ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಗೋವಾದಲ್ಲಿ ಹಲವು ‘ಮಡ್‌ ಬಾತ್‌’ ತಾಣಗಳಿದ್ದು, ದೇಶ, ವಿದೇಶದ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಮಡ್‌ ಬಾತ್‌ನಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.