ADVERTISEMENT

ಬಾವಿಯೊಳಗೆ ಬಿದ್ದ ಕೋಳಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರ ದಾರುಣ ಸಾವು!

ಪಿಟಿಐ
Published 12 ಜುಲೈ 2025, 13:03 IST
Last Updated 12 ಜುಲೈ 2025, 13:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಿಲಾಸ್‌ಪುರ: ಬಾವಿಯೊಳಗೆ ಬಿದ್ದ ಕೋಳಿಯನ್ನು ಕಾಪಾಡಲು ಹೋಗಿ ವಿಷಕಾರಿ ಅನಿಲ ಸೇವಿಸಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಛತ್ತೀಸಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಲ್ಘಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಹಿ ಕಚಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಿನೇಶ್ ಪಟೇಲ್ (35) ಆರಂಭದಲ್ಲಿ ಬಾವಿಯೊಳಗೆ ಬಿದ್ದ ಕೋಳಿಯನ್ನು ಕಾಪಾಡಲು ಇಳಿದಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಇದನ್ನು ಕಂಡು ದಿನೇಶ್ ಅವರ ಸಹೋದರ ದಿಲೀಪ್ ಪಟೇಲ್ (30) ಕೂಡ ಬಾವಿಗೆ ಇಳಿದಿದ್ದ. ಆದರೆ, ಆತ ಕೂಡ ಅಸ್ವಸ್ಥನಾಗಿದ್ದ ಎಂದು ಅವರು ಹೇಳಿದ್ದಾರೆ.

ADVERTISEMENT

ಸ್ವಲ್ಪ ಸಮಯದವರೆಗೆ ಸಹೋದರರು ಬಾವಿಯಿಂದ ಹೊರಗೆ ಬಾರದಿದ್ದಾಗ ಸ್ಥಳೀಯರು ಮಾಹಿತಿ ನೀಡಿದ್ದರು. ಶುಕ್ರವಾರ ತಡರಾತ್ರಿ ಸಹೋದರರ ಶವಗಳನ್ನು ಹೊರತೆಗೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿದ ಪರಿಣಾಮ ಸಹೋದರರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.