ADVERTISEMENT

ಬಿಆರ್‌ಎಸ್‌ ವಿಸ್ತರಣೆಗೆ ಒಂದು ತಿಂಗಳು ಕಾರ್ಯಕ್ರಮ: ಕೆ.ಚಂದ್ರಶೇಖರ್‌ ರಾವ್‌

ಪಿಟಿಐ
Published 19 ಮೇ 2023, 14:28 IST
Last Updated 19 ಮೇ 2023, 14:28 IST
ಕೆ.ಚಂದ್ರಶೇಖರ್‌ ರಾವ್‌
ಕೆ.ಚಂದ್ರಶೇಖರ್‌ ರಾವ್‌   

ನಾಂದೇಡ್‌: ಮಹಾರಾಷ್ಟ್ರದ ಸುಮಾರು 45,000 ಗ್ರಾಮಗಳಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಜಾಲವನ್ನು ವಿಸ್ತರಿಸಲು ಒಂದು ತಿಂಗಳ ಕಾಲ ಕಾರ್ಯಕ್ರಮ ನಡೆಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಶುಕ್ರವಾರ ಘೋಷಿಸಿದ್ದಾರೆ.

ತರಬೇತಿ ಕಾರ್ಯಕ್ರಮದಲ್ಲಿ ಪಕ್ಷದ  ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಅವರು, ‘ಈ 30 ದಿನಗಳಲ್ಲಿ ಕಾರ್ಯಕರ್ತರ ಅವಿರತ ಶ್ರಮದಿಂದ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ತರಬಹುದು’ ಎಂದು ಹೇಳಿದರು.

‘ಪ್ರತಿ ಸ್ಥಳದಲ್ಲೂ ರೈತರು, ಯುವ ಜನತೆ, ಹಿಂದುಳಿದ ವರ್ಗ, ಬುಡಕಟ್ಟು ಜನರು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರನ್ನು ಒಳಗೊಂಡ 9 ಸಮಿತಿ ರಚನೆ ಮಾಡಿ. ಮೇ 22ರಿಂದ ಜೂನ್‌ 22ರವರಗೆ ಪ್ರತಿ ದಿನ ಐದು ಗ್ರಾಮಗಳಿಗೆ ಭೇಟಿ ನೀಡಿ’ ಎಂದು ಕರೆ ನೀಡಿದರು.

ADVERTISEMENT

‘ಬೇರೆ ಪಕ್ಷಗಳು ಶ್ರೀಮಂತ ಪಕ್ಷಗಳು, ನಮ್ಮದು ಬಡ ಪಕ್ಷ. ರೈತರು ಮತ್ತು ದಲಿತರ ಮನೆಗೆ ತೆರಳಿ ಅವರೊಂದಿಗೆ ಊಟ ಮಾಡಿ’ ಎಂದು ಹೇಳಿದರು.

ರಾಜ್ಯದ 45,000 ಗ್ರಾಮಗಳಿಗೆ ಮತ್ತು ಪುರಸಭೆಯ 5000 ವಾರ್ಡ್‌ಗಳಿಗೆ ತೆರಳುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 288 ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.