ADVERTISEMENT

ಸುಲಿಗೆ ಪ್ರಕರಣ: ಬಿಆರ್‌ಎಸ್‌ ಶಾಸಕ ಕೌಶಿಕ್‌ ರೆಡ್ಡಿ ಬಂಧನ

ಪಿಟಿಐ
Published 21 ಜೂನ್ 2025, 10:49 IST
Last Updated 21 ಜೂನ್ 2025, 10:49 IST
<div class="paragraphs"><p>ಕೌಶಿಕ್ ರೆಡ್ಡಿ</p></div>

ಕೌಶಿಕ್ ರೆಡ್ಡಿ

   

ಚಿತ್ರ: X/@KaushikReddyBRS

ಹೈದರಾಬಾದ್‌(ತೆಲಂಗಾಣ): ಸುಲಿಗೆ ಪ್ರಕರಣದಲ್ಲಿ ಬಿಆರ್‌ಎಸ್‌ ಶಾಸಕ ಕೌಶಿಕ್‌ ರೆಡ್ಡಿ ಅವರನ್ನು ವಾರಂಗಲ್‌ ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಆರ್‌ಜಿಐ ವಿಮಾನ ನಿಲ್ದಾಣದಲ್ಲಿ ಕೌಶಿಕ್ ರೆಡ್ಡಿ ಅವರನ್ನು ವಶಕ್ಕೆ ಪಡೆಯಲಾಯಿತು ಎಂದೂ ಅವರು ತಿಳಿಸಿದ್ದಾರೆ.

‘ಕೌಶಿಕ್ ರೆಡ್ಡಿ ಅವರು ಕ್ವಾರಿ ಮಾಲೀಕರನ್ನು ಬೆದರಿಸಿ ₹25 ಲಕ್ಷ ಪಡೆದಿದ್ದು, ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಪಕ್ಷದ ಶಾಸಕನ ಬಂಧನವಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, 'ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಸಚಿವರು, ಕಾಂಗ್ರೆಸ್‌ ನಾಯಕರ ಭ್ರಷ್ಟಾಚಾರ, ಅಕ್ರಮಗಳನ್ನು ಪ್ರಶ್ನಿಸಿದ್ದಕ್ಕೆ ಕೌಶಿಕ್ ರೆಡ್ಡಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.