ಹೈದರಾಬಾದ್: ‘ತೆಲಂಗಾಣವು ದೇಶದಲ್ಲೇ ಅತ್ಯಂತ ಕಡಿಮೆ ಭ್ರಷ್ಟಾಚಾರ ಇರುವ ರಾಜ್ಯ ಎಂದು ಕೇಂದ್ರ ಸರ್ಕಾರದ ವರದಿಯೊಂದು ಹೇಳಿದೆ’ ಎಂದು ಬಿಆರ್‌ಎಸ್ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಹೇಳಿದ್ದಾರೆ.
ತೆಲಂಗಾಣ ಅತ್ಯಂತ ಭ್ರಷ್ಟ ರಾಜ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಆರೋಪಕ್ಕೆ ಕವಿತಾ ಹೀಗೆ ತಿರುಗೇಟು ನೀಡಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಕವಿತಾ, ರಾಹುಲ್ ಗಾಂಧಿ ವಿರುದ್ಧ ಮಾತಿನ ಪ್ರಹಾರ ಮಾಡಿದ್ದಾರೆ. ‘ರಾಹುಲ್ ಒಬ್ಬ ನಾಯಕ ಅಲ್ಲ, ಅವರು ಬರೆದುಕೊಟ್ಟಿದ್ದನ್ನು ಓದುವವರು. ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರುವ ಮುನ್ನ ಅವರು ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಬರಬೇಕು’ ಎಂದು ಕವಿತಾ ಕುಟುಕಿದ್ದಾರೆ.
‘ನಮ್ಮ ತಂದೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇತರ ರಾಜಕಾರಣಿಗಳಂತಲ್ಲ. ಅವರು ಚಳವಳಿಗಳಿಂದ ಬಂದವರು, ತಳಮಟ್ಟದಿಂದ ಬೆಳೆದು ನಾಯಕರಾದವರು. ಅವರಿಗೆ ಈ ರಾಜ್ಯದ ಜನರ ಕಷ್ಟಗಳ ಅರಿವಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಮಟ್ಟದಲ್ಲಿ ಇದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.