ನವದೆಹಲಿ: ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ವಾಯು ಘಟಕವು ತನ್ನ 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ವಿಮಾನ ಎಂಜಿನಿಯರ್ ಅನ್ನು ನೇಮಕ ಮಾಡಿಕೊಂಡಿದೆ.
ಇನ್ಸ್‌ಪೆಕ್ಟರ್ ಭಾವನಾ ಚೌಧರಿ ಹಾಗೂ ನಾಲ್ವರು ಪುರುಷ ಅಧೀನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಅವರು ನೂತನ ಅಧಿಕಾರಿಗಳಿಗೆ ಫ್ಲೈಯಿಂಗ್ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿದರು.
‘ಐವರು ಅಧೀನ ಅಧಿಕಾರಿಗಳು ಇತ್ತೀಚೆಗೆ ಎರಡು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದರು. ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದ ಸಂದರ್ಭದಲ್ಲಿ ಇವರು ಕಾರ್ಯಾಚರಣೆ ನಡೆಸಿದ್ದರಿಂದ ತರಬೇತಿಯು ಇನ್ನಷ್ಟು ಉತ್ತಮವಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.
ಬಿಎಸ್‌ಎಫ್ ವಾಯು ಘಟಕವು ತನ್ನ ಎಮ್‌ಐ–17 ಹೆಲಿಕಾಪ್ಟರ್ ಫ್ಲೀಟ್‌ನಲ್ಲಿ ಎಂಜಿನೀರ್‌ಗಳ ಕೊರತೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ.
ಗೃಹ ಸಚಿವಾಲಯದ ವಾಯುಯಾನ ಘಟಕವನ್ನು ನಿರ್ವಹಿಸುವ ಕಾರ್ಯವನ್ನು ಬಿಎಸ್ಎಫ್‌ಗೆ 1969ರಲ್ಲಿ ವಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.