ADVERTISEMENT

ಗುಜರಾತ್‌: ಬಿಎಸ್‌ಎಫ್‌ನಿಂದ ಚರಾಸ್‌ನ 10 ಪೊಟ್ಟಣ ವಶ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 11:01 IST
Last Updated 12 ಏಪ್ರಿಲ್ 2023, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುಜ್‌ (ಪಿಟಿಐ): ಗುಜರಾತ್‌ನ ಕಛ್‌ ಜಿಲ್ಲೆಯ ಜಕಾವ್‌ ಕರಾವಳಿಯ ಲುನಾ ಬೆಟ್‌ ದ್ವೀಪದಲ್ಲಿ ಚರಾಸ್‌ನ (ಮಾದಕವಸ್ತು) 10 ಪೊಟ್ಟಣ ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾಗಿರುವ ಚರಾಸ್‌ ಪೊಟ್ಟಣಗಳ ಮೇಲೆ ‘ಅಫ್ಘನ್‌ ಪ್ರಾಡಕ್ಟ್‌’ ಎಂದು ಮುದ್ರಿಸಲಾಗಿದೆ. ಇವು ಪಾಕಿಸ್ತಾನದ ಕರಾವಳಿ ಮೂಲಕ ಭಾರತದ ಕರಾವಳಿಗೆ ತಲುಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2020ರ ಮೇನಿಂದ ಈವರೆಗೆ ಜಖಾವ್‌ ಕರಾವಳಿ, ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಂದ ವಾರಸುದಾರರಿಲ್ಲದ ಸುಮಾರು 1,548 ಚರಾಸ್‌ ಪೊಟ್ಟಣಗಳನ್ನು ಬಿಎಸ್‌ಎಫ್‌ ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್‌ಎಫ್‌ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.