ADVERTISEMENT

ಗಡಿಯಲ್ಲಿ ಕಳ್ಳಸಾಗಣೆಯಾಗುತ್ತಿದ್ದ ಡ್ರಗ್ಸ್, ಶಸ್ತ್ರಾಸ್ತ್ರ ಬಿಎಸ್ಎಫ್ ವಶಕ್ಕೆ

ಪಿಟಿಐ
Published 18 ಫೆಬ್ರುವರಿ 2023, 10:10 IST
Last Updated 18 ಫೆಬ್ರುವರಿ 2023, 10:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಶನಿವಾರ ಪಾಕಿಸ್ತಾನದಿಂದ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಾದಕ ದ್ರವ್ಯಗಳು, ಚೀನಾ ಮತ್ತು ಟರ್ಕಿ ನಿರ್ಮಿತ ಪಿಸ್ತೂಲ್‌ಗಳು ಮತ್ತು 242 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಮುಂಜಾನೆ 5.30ರ ಸುಮಾರಿಗೆ ಗುರುದಾಸ್‌ಪುರ ಸೆಕ್ಟರ್‌ನ ಡೇರಾ ಬಾಬಾ ನಾನಕ್ (ಡಿಬಿಎನ್) ಮತ್ತು ಶಿಕಾರ್ ಗಡಿ ಪೋಸ್ಟ್‌ನ ಬಳಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಶಸ್ತ್ರಸಜ್ಜಿತ ಕಳ್ಳಸಾಗಾಣಿಕೆದಾರರ ಚಲನವಲನಗಳ ಮೇಲೆ ಭದ್ರತಾ ಪಡೆಗಳು ನಿಗಾವಹಿಸಲಾಗಿತ್ತು ಎಂದು ಗಡಿ ಭದ್ರತಾ ಪಡೆ ವಕ್ತಾರರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಶೋಧ ನಡೆಸಿದಾಗ ಹೆರಾಯಿನ್‌ ಇರುವ ಶಂಕಿತ 20 ಪ್ಯಾಕೆಟ್‌ಗಳು, ಚೀನಾ ಮತ್ತು ಟರ್ಕಿಯಲ್ಲಿ ನಿರ್ಮಿತ ತಲಾ ಎರಡು ಪಿಸ್ತೂಲ್‌ಗಳು, 242 ಮದ್ದುಗುಂಡುಗಳು, ಆರು ಮ್ಯಾಗಜೀನ್‌ಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.