ADVERTISEMENT

ಪಾಕ್‌ಗೆ ಸೇರಿದ ಮೀನುಗಾರಿಕೆ ದೋಣಿ ಜಪ್ತಿ

ಪಿಟಿಐ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಅಹಮದಾಬಾದ್‌ : ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿನ ಭಾರತ–ಪಾಕ್‌ ಗಡಿ ಸನಿಹವಿರುವ ಹರಾಮಿ ನಾಲೆ ಬಳಿ ಪಾಕಿಸ್ತಾನಕ್ಕೆ ಸೇರಿದ ಎರಡು ಮೀನುಗಾರಿಕೆ ದೋಣಿಗಳನ್ನು ಶನಿವಾರ ಜಪ್ತಿ ಮಾಡಿದೆ.

‘ಬಿಎಸ್‌ಎಫ್‌ ತಂಡವು ಮೂರು ದಿನಗಳಲ್ಲಿ ಪಾಕಿಸ್ತಾನಕ್ಕೆ ಸೇರಿದ ಒಟ್ಟು ಒಂಬತ್ತು ದೋಣಿಗಳನ್ನು ಜಪ್ತಿ ಮಾಡಿದೆ. ಒಬ್ಬ ಮೀನುಗಾರನನ್ನೂ ಬಂಧಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಬಿಎಸ್‌ಎಫ್‌ನ ಭುಜ್‌ ತಂಡವು ಗಸ್ತು ನಡೆಸುತ್ತಿದ್ದ ವೇಳೆ ಹರಾಮಿ ನಾಲೆ ಸಮೀಪ ಪಾಕಿಸ್ತಾನದ ಕೆಲ ಮೀನುಗಾರರ ಚಲನವಲನ ಗಮನಿಸಿತ್ತು. ಕೂಡಲೇ ಸ್ಥಳಕ್ಕೆ ಹೋಗಿ ದೋಣಿಗಳನ್ನು ಜಪ್ತಿ ಮಾಡಿತ್ತು. ಅವುಗಳಲ್ಲಿ ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಸಿಕ್ಕಿಲ್ಲ’ ಎಂದೂ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.