ADVERTISEMENT

ದೆಹಲಿಯ ನಜಾಫ್‌ಗಡದಲ್ಲಿ ಬಿಎಸ್‌ಎಫ್‌ ಸಬ್‌ ಇನ್‌ಸ್ಪೆಕ್ಟರ್‌ಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 12:26 IST
Last Updated 28 ಆಗಸ್ಟ್ 2022, 12:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರಿಗೆ ಕಾರಿನಲ್ಲಿ ಅವರ ಸ್ನೇಹಿತನೇ ಗುಂಡು ಹಾರಿಸಿದ್ದಾನೆ ಎನ್ನಲಾದ ಘಟನೆ ನೈಋತ್ಯ ದೆಹಲಿಯ ನಜಾಫ್‌ಗಡದಲ್ಲಿ ನಡೆದಿದೆಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಗುಂಡೇಟು ತಿಂದ ಸಬ್‌ ಇನ್‌ಸ್ಪೆಕ್ಟರ್‌ ಸಂದೀಪ್‌ ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಹೇಳಿಕೆ ನೀಡುವ ಸ್ಥಿತಿಯಲ್ಲಿ ಅವರು ಇಲ್ಲ. ಮತ್ತಿನಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವೆಂಕಟೇಶ್ವರ ಆಸ್ಪತ್ರೆಯು ನಜಾಫ್‌ಗಡ ಪೊಲೀಸ್‌ ಠಾಣೆಗೆಗುಂಟೇಟಿನ ಕುರಿತ ಮಾಹಿತಿಯನ್ನು ನೀಡಿತು. ಹೀಗಾಗಿ ಈ ವಿಷಯ ಬೆಳಕಿಗೆ ಬಂದಿತು. ಗುಂಡೇಟು ತಿಂದಿರುವ ಸಬ್‌ ಇನ್‌ಸ್ಪೆಕ್ಟರ್‌ ತಮ್ಮ ಇಬ್ಬರು ಸಂಬಂಧಿ, ಮತ್ತೊಬ್ಬ ವ್ಯಕ್ತಿ ಸಂದೀಪ್‌ ಸೆಹ್ವಾಗ್‌ ಜೊತೆ ದ್ವಾರಕಾ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದರು. ಸೆಹ್ವಾಗ್‌ ಬಳಿ ಪಿಸ್ತೂಲು ಇತ್ತು ಮತ್ತು ಆತ ಅಮಲೇರಿದ ಸ್ಥಿತಿಯಲ್ಲಿ ಇದ್ದ. ಆತ ಪಿಸ್ತೂಲಿನಿಂದ ಗುಂಡು ಹಾರಿಸಿದ. ಅದು ಸಂದೀಪ್‌ಗೆ ತಗುಲಿತು. ಸೆಹ್ವಾಗ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.