ADVERTISEMENT

BSNL 4G: ದೆಹಲಿಯಲ್ಲಿ 4ಜಿ ಸೇವೆ ಆರಂಭಿಸಿದ ಬಿಎಸ್‌ಎನ್‌ಎಲ್‌

ಪಿಟಿಐ
Published 15 ಆಗಸ್ಟ್ 2025, 9:20 IST
Last Updated 15 ಆಗಸ್ಟ್ 2025, 9:20 IST
   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 4ಜಿ ಸೇವೆ ಆರಂಭವಾಗಲಿದೆ ಎಂದು ಸರ್ಕಾರಿ ಸಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ಶುಕ್ರವಾರ ಘೋಷಿಸಿದೆ.

ಬಿಎಸ್‌ಎನ್‌ಎಲ್‌ ಸಿಮ್‌ ಹೊಂದಿರುವ ಗ್ರಾಹಕರಿಗೆ ಪಾಲುದಾರ ನೆಟ್‌ವರ್ಕ್ ಪ್ರವೇಶ ವ್ಯವಸ್ಥೆಯ ಮೂಲಕ 4ಜಿ ಸೇವೆ ಒದಗಿಸಲಿದ್ದೇವೆ ಎಂದು ತಿಳಿಸಿದೆ.

ಸ್ಥಳೀಯ ರೋಲ್ಔಟ್ ಕಾರ್ಯಕ್ರಮದ ಮೂಲಕ ರಾಷ್ಟ್ರವ್ಯಾಪ್ತಿ 4ಜಿ ಸೇವೆ ನೀಡುವ ಉದ್ದೇಶವನ್ನು ಕಂಪನಿ ಹೊಂದಿದ್ದು, ಆರಂಭಿಕ ಹಂತದಲ್ಲಿ ದೆಹಲಿಯಲ್ಲಿ ಸೇವೆ ನೀಡಲಾಗುತ್ತಿದೆ ಎಂದು ಹೇಳಿದೆ.

ADVERTISEMENT

‘ಗ್ರಾಹಕರಿಗೆ 4ಜಿ ಸೇವೆ ನೀಡುವ ಉದ್ದೇಶದಿಂದ ಕಳೆದ ವರ್ಷ ₹25 ಸಾವಿರ ಕೋಟಿ ವೆಚ್ಚ ಮಾಡಿದ್ದು, 1 ಲಕ್ಷ ಮೊಬೈಲ್‌ ಟವರ್‌ ನಿರ್ಮಿಸಲಾಗಿದೆ.

ಇಂದಿನಿಂದ(ಆ.15) ದೆಹಲಿಯಲ್ಲಿ 4ಜಿ ನೆಟ್‌ವರ್ಕ್ ಇರುವ ಎಲ್ಲಾ ಮೊಬೈಲ್‌ಗಳಲ್ಲಿ ಕೂಡ ಹೊಸ ಗ್ರಾಹಕರು 4ಜಿ ಸೇವೆ ಪಡೆಯಬಹುದು’ ಎಂದು ಬಿಎಸ್‌ಎನ್‌ಎಲ್‌ ಸಿಎಮ್‌ಡಿ ಎ. ರಾಬರ್ಟ್ ಜೆ. ರವಿ ತಿಳಿಸಿದ್ದಾರೆ.

ಟಿಸಿಎಸ್‌ ಹಾಗೂ ಸಿ ಡಾಟ್‌ ಕಂಪನಿಗಳ ಸಹಯೋಗದೊಂದಿಗೆ ಬಿಎಸ್‌ಎನ್‌ಎಲ್‌ ಅವರು 4ಜಿ ಸೇವೆ ನೀಡುತ್ತಿದೆ. ನೆಟ್‌ವರ್ಕ್ ಉತ್ತಮಪಡಿಸುವ ಉದ್ದೇಶದಿಂದ ಇನ್ನೂ ₹47 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.