ADVERTISEMENT

BSNLನ ‘ಸ್ವದೇಶಿ’ 4G ನೆಟ್‌ವರ್ಕ್ ಸೇವೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪಿಟಿಐ
Published 26 ಸೆಪ್ಟೆಂಬರ್ 2025, 7:25 IST
Last Updated 26 ಸೆಪ್ಟೆಂಬರ್ 2025, 7:25 IST
bsnl
bsnl   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತದ(ಬಿಎಸ್‌ಎನ್‌ಎಲ್) ‘ಸ್ವದೇಶಿ’ 4ಜಿ ನೆಟ್‌ವರ್ಕ್‌ಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಭಾರತದ ಸ್ವದೇಶಿ ನಿರ್ಮಿತ ನೆಟ್‌ವರ್ಕ್ ಕ್ಲೌಡ್ ಆಧಾರಿತವಾಗಿದ್ದು, 5Gಗೆ ಸರಾಗವಾಗಿ ಅಪ್‌ಗ್ರೇಡ್ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ನ 4G ಸ್ಟ್ಯಾಕ್ ಅನ್ನು ಸೆಪ್ಟೆಂಬರ್ 27ರಂದು ದೇಶದ ಹಲವು ರಾಜ್ಯಗಳ ಸುಮಾರು 98,000 ಪ್ರದೇಶರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ADVERTISEMENT

ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ನೆಟ್‌ವರ್ಕ್‌ಗೆ ಚಾಲನೆ ನೀಡಲಿದ್ದಾರೆ ಎಂದಿದ್ದಾರೆ.

'ಇದು ಟೆಲಿಕಾಂ ವಲಯಕ್ಕೆ ಹೊಸ ಯುಗ. ಭಾರತವು ಟೆಲಿಕಾಂ ಉಪಕರಣಗಳನ್ನು ಉತ್ಪಾದಿಸುವ ಮತ್ತು ತಯಾರಿಸುವ ದೇಶಗಳ ಸಾಲಿಗೆ ಪ್ರವೇಶಿಸಿದ ಯುಗ. ಇದರಲ್ಲಿ ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ, ಚೀನಾ ಸೇರಿವೆ. ಭಾರತ ಈಗ ಐದನೇ ದೇಶವಾಗಿದೆ’ಎಂದು ಸಿಂಧಿಯಾ ಹೇಳಿದ್ದಾರೆ.

ಡಿಜಿಟಲ್ ಭಾರತ್ ನಿಧಿ ಯೋಜನೆ ಮೂಲಕ ಭಾರತದ ಶೇ 100 ರಷ್ಟು 4G ಸ್ಯಾಚುರೇಶನ್ ನೆಟ್‌ವರ್ಕ್ ಅನ್ನು ಸಹ ಪ್ರಧಾನಿ ಅನಾವರಣಗೊಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.