ADVERTISEMENT

ಗನ್ ಹಿಡಿದು ಬೆದರಿಸಿದ್ದ ಬಿಎಸ್‌ಪಿ ನಾಯಕನ ಪುತ್ರ ಆಶಿಶ್‌ ಪಾಂಡೆ ಶರಣು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2018, 7:15 IST
Last Updated 18 ಅಕ್ಟೋಬರ್ 2018, 7:15 IST
   

ನವದೆಹಲಿ:ಪ್ರಮುಖ ಪಂಚತಾರಾ ಹೊಟೇಲ್‌ ಹೊರಭಾಗದಲ್ಲಿ ಪಿಸ್ತೂಲ್ ಹಿಡಿದು ಓಡಾಡಿದ್ದ ಬಿಎಸ್‌ಪಿ ಮಾಜಿ ಸಂಸದನ ಪುತ್ರಆಶಿಶ್‌ ಪಾಂಡೆ ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಘಟನೆ ಜರುಗಿದ ದಿನದಿಂದ ಆಶಿಸ್‌ ಪಾಂಡೆನಾಪತ್ತೆಯಾಗಿದ್ದರು. ಪೊಲೀಸರು ಆಶಿಸ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ನ್ಯಾಯಾಲಯಕ್ಕೆ ಶರಣಾದ ಬಳಿಕ ವಿಡಿಯೊ ಮೂಲಕ ಹೇಳಿಕೆ ನೀಡಿರುವ ಆಶಿಸ್‌, ದೇಶದಾದ್ಯಂತ ಪೊಲೀಸರು ನನ್ನನ್ನು ಭಯೋತ್ಪಾದಕನಂತೆ ಬಿಂಬಿಸಿದ್ದಾರೆ, ಇದಕ್ಕೆ ಅವರು ಹೊರಡಿಸಿರುವ ನೋಟಿಸ್‌ ಸಾಕ್ಷಿಯಾಗಿದೆ. ಬೇಕಾದರೆ ನೀವೇ ಸಿಸಿ ಕ್ಯಾಮೆರಾದ ದೃಶ್ಯಾವಳಿವಳಿಗಳನ್ನು ಪರಿಶೀಲಿಸಿ, ಯಾರು ಮಹಿಳೆಯರ ಶೌಚಾಲಯಕ್ಕೆ ಹೋದರು, ಯಾರು ಯಾರನ್ನು ನಿಂದಿಸಿದರು ಎಂಬುದು ಗೊತ್ತಾಗುತ್ತದೆ ಎಂದು ಅಶಿಸ್‌ ಹೇಳಿದ್ದಾರೆ.

ADVERTISEMENT

ನನ್ನ ರಕ್ಷಣೆಗಾಗಿ ಪಿಸ್ತೂಲನ್ನು ಹೊಂದಿದ್ದೇನೆ, ನಾನು ಅದನ್ನು ಬೆದರಿಸಲಿಕ್ಕೆ ಬಳಕೆ ಮಾಡಿಲ್ಲ ಎಂದುಆಶಿಸ್ ಪಾಂಡೆ ವಿಡಿಯೊದಲ್ಲಿ ಹೇಳಿದ್ದಾರೆ.

ಹೊಟೇಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ 10 ಸೆಕೆಂಡ್‌ಗಳ ವಿಡಿಯೊದಲ್ಲಿಆಶಿಶ್‌ ಗನ್‌ ಹಿಡಿದು ಮಹಿಳೆಯ ಮೇಲೆ ಕೂಗಾಡುತ್ತಿರುವುದು, ಬೆದರಿಸುತ್ತಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಗಮನಿಸಬಹುದು. ಮತ್ತೊಬ್ಬ ಮಹಿಳೆ ಹಾಗೂ ಭದ್ರತಾ ಸಿಬ್ಬಂದಿ ಸಮಾಧಾನ ಪಡಿಸುತ್ತಿರುವುದು ಸ್ಪಷ್ಟವಾಗಿದೆ.

ಅಕ್ಟೋಬರ್‌ 14ರಂದು ಪಾರ್ಟಿ ನಡೆದ ಬಳಿಕ ಈ ಘಟನೆ ನಡೆದಿರುವುದಾಗಿ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.