ADVERTISEMENT

ವಿಪ್ ಅಲ್ಲ ಕ್ಲೀನ್‌ಚಿಟ್: ಬಿಎಸ್‌ಪಿ ವಿರುದ್ಧ ಆಕ್ರೋಶ ಪ್ರಿಯಾಂಕಾ ಗಾಂಧಿ ಟೀಕೆ

ಕಾಂಗ್ರೆಸ್ ವಿರುದ್ಧ ಮತ ಹಾಕಲು ಶಾಸಕರಿಗೆ ವಿಪ್ ನೀಡಿದ್ದಕ್ಕೆ ಆಕ್ರೋಶ

ಪಿಟಿಐ
Published 28 ಜುಲೈ 2020, 10:19 IST
Last Updated 28 ಜುಲೈ 2020, 10:19 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ: ಶಾಸಕರಿಗೆ ವಿಪ್ ನೀಡಿರುವ ಬಿಎಸ್‌ಪಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ಈ ಮೂಲಕ ಕ್ಲೀನ್‌ಚಿಟ್ ನೀಡಲಾಗಿದೆ’ ಎಂದು ಟೀಕಿಸಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಮತ ಹಾಕುವಂತೆ ತನ್ನ ಆರು ಶಾಸಕರಿಗೆ ಬಿಎಸ್‌ಪಿ ಭಾನುವಾರ ವಿಪ್ ನೀಡಿತ್ತು.

‘ಬಿಜೆಪಿ ಬೆಂಬಲಿಸಿ ಬಿಎಸ್‌ಪಿ ವಿಪ್ ನೀಡಿದೆ. ಇದು ಬರೀ ವಿಪ್‌ ಅಲ್ಲ, ಕ್ಲೀನ್‌ಚಿಟ್’ ಎಂದು ಪ್ರಿಯಾಂಕಾ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ADVERTISEMENT

ಈ ಆರು ಶಾಸಕರು ಸ್ವಇಚ್ಛೆಯಿಂದ ಕಾಂಗ್ರೆಸ್ ಸೇರಿದ್ದೇವೆ ಎಂದುಕಳೆದ ವರ್ಷ ಘೋಷಿಸಿಕೊಂಡಿದ್ದರು. ಆದರೆ ಬಿಎಸ್‌ಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅದರ ರಾಜ್ಯ ಘಟಕವೊಂದು ಬೇರೊಂದು ಪಕ್ಷದಲ್ಲಿ ವಿಲೀನವಾಗಲು ಸಾಧ್ಯವಿಲ್ಲ ಎಂಬುದು ಬಿಎಸ್‌ಪಿ ವಾದ.

ಸಚಿನ್ ಪೈಲಟ್ ನೇತೃತ್ವದಲ್ಲಿ 19 ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸ್ಥಾನ ಅಲುಗಾಡುತ್ತಿದೆ. ಬಹುಮತ ಸಾಬೀತುಪಡಿಸಲು ಅಧಿವೇಶನ ಕರೆಯುವಂತೆ ಗೆಹ್ಲೋಟ್ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.