ADVERTISEMENT

ರಾಜಸ್ಥಾನ: ಕಾಂಗ್ರೆಸ್‌ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸು ಪಡೆದ ಬಿಟಿಪಿ ಪಕ್ಷ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 2:26 IST
Last Updated 12 ಡಿಸೆಂಬರ್ 2020, 2:26 IST
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್   

ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಭಾರತೀಯ ಟ್ರಿಬಲ್‌ ಪಕ್ಷ (ಬಿಟಿಪಿ) ಶುಕ್ರವಾರ ಹಿಂಪಡೆದುಕೊಂಡಿದೆ.

ಇಲ್ಲಿನ ದುಂಗಾರ್‌ಪುರ್‌ನಲ್ಲಿ ಜಿಲ್ಲಾ ಪಂಚಾಯತ್‌ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಬಿಜೆಪಿಗೆ ಸೇರಿ ಬಿಟಿಪಿ ಪಕ್ಷಕ್ಕೆ ಅಧಿಕಾರ ತಪ್ಪಿಸಿದ್ದರಿಂದ ಬಿಟಿಪಿಯ ವರಿಷ್ಠರು ಕಾಂಗ್ರೆಸ್‌ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.

ಬಿಟಿಪಿ ಪಕ್ಷ ಇಬ್ಬರು ಶಾಸಕರನ್ನು ಹೊಂದಿದೆ. ಬಿಟಿಪಿಯ ಶಾಸಕ ಹಾಗೂ ಹಿರಿಯ ಮುಖಂಡ ರಾಮಪ್ರಸಾದ್‌ ಮಾತನಾಡಿ, ನಾವು ಗೆಹ್ಲೋಟ್‌ ಸರ್ಕಾರ ಇಕ್ಕಟ್ಟಿನಲ್ಲಿ ಇದ್ದಾಗ ಸಹಾಯ ಮಾಡಿದೆವು. ಆದರೆ ಅವರು ನಮಗೆ ಮೋಸ ಮಾಡಿದರು ಎಂದು ಹೇಳಿದ್ದಾರೆ.

ADVERTISEMENT

200 ಸದಸ್ಯ ಬಲದ ರಾಜಸ್ಥನ ವಿಧಾನಸಭೆಯಲ್ಲಿ ಕಾಂಗ್ರೆಸ್‌ 105 ಸ್ಥಾನಗಳನ್ನು ಹೊಂದಿದೆ. ಬಿಟಿಪಿ 2, ಪಕ್ಷೇತರರು 13, ಆರ್‌ಜೆಡಿ 1, ಇಬ್ಬರು ಸಿಪಿಐ, ರಾಷ್ಟ್ರೀಯ ಲೋಕತಾಂತ್ರಿಕ್‌ ಪಕ್ಷದ 3 ಶಾಸಕರು ಇದ್ದಾರೆ. ಬಿಜೆಪಿ 71 ಸ್ಥಾನಗಳನ್ನು ಹೊಂದಿದೆ. ಮೂರು ಸ್ಥಾನಗಳು ಖಾಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.