ADVERTISEMENT

ಹಣಕಾಸು ಸಚಿವೆ ನಿರ್ಮಲಾ ಅವರಿಂದ ಬಜೆಟ್‌ ಮಂಡನೆ ಆರಂಭ 

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 5:46 IST
Last Updated 5 ಜುಲೈ 2019, 5:46 IST
ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಆರಂಭಿಸಿದರು.
ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಆರಂಭಿಸಿದರು.   

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಬೆಳಿಗ್ಗೆ 11ಕ್ಕೆ ಸಂಸತ್‌ನಲ್ಲಿ ಬಜೆಟ್‌ ಮಂಡನೆ ಆರಂಭಿಸಿದರು.

ಸದನಕ್ಕೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿದ ಸಭಾಧ್ಯಕ್ಷರು, ಬಜೆಟ್‌ ಮಂಡನೆಗೆ ಹಣಕಾಸು ಸಚಿವರಿಗೆ ಅವಕಾಶ ಮಾಡಿಕೊಟ್ಟರು.
ತಮ್ಮ ಮೊದಲ ಬಜೆಟ್‌ ಅನ್ನು ಸೀತಾರಾಮನ್‌ ಮಂಡಿಸುತ್ತಿದ್ದಾರೆ.

‘ಕಾರ್ಯ ಪುರುಷ ಕಾರ್ಯೇನ ಲಕ್ಷಣಂ’ ಎಂಬ ಚಾಣಕ್ಯ ನೀತಿಯನ್ನು ಉಲ್ಲೇಖಿಸಿದರು. ಉರ್ದು ಭಾಷೆಯಲ್ಲಿಯ ಸಾಲೊಂದನ್ನು ಉಲ್ಲೇಖಿಸಿದರು.

ADVERTISEMENT

‘ನವ ಭಾರತ’

ದೇಶದ ಜನ ಮತ್ತೊಮ್ಮೆ ಎನ್‌ಡಿಎ ಸರ್ಕಾರವನ್ನುಆಯ್ಕೆ ಮಾಡುವ ಮೂಲಕ ನವ ಭಾರದ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್‌ ಜನರಿಗೆ ಅಭಿನಂದನೆ ಸಲ್ಲಿಸಿದರು.

ಭಾರತ ಇದೇ ವರ್ಷವೇ 3 ಟ್ರಿಲಿಯನ್‌ ದೇಶವಾಗಲಿದೆ. 5 ಟ್ರಿಲಿಯನ್‌ ಆರ್ಥಿಕತೆಗೆ ಯೋಜನೆ ರೂಪಿಸಲಾಗಿದೆ. ಮುದ್ರಾ ಯೋಜನೆ ಮೂಲಕ ಸಾಮಾನ್ಯ ಜನರ ಜೀವನ ಬದಲಾವಣೆಯಾಗಿದೆ. ಗಗನಯಾನ, ಚಂದ್ರಯಾನ, ಆಯುಷ್ಮಾನ್‌ ಆರೋಗ್ಯ ಯೋಜನೆ ಮೂಲಕ ಭಾರತ ಪ್ರಕಾಶಿಸುತ್ತಿದೆ ಎಂದರು.

ಭಾರತದ ಆರ್ಥಿಕತೆ ಶರವೇಗದಲ್ಲಿ ಬೆಳೆಯುತ್ತಿದ್ದು, ಸರ್ಕಾರಿ ಪ್ರಕ್ರಿಯೆಗಳನ್ನು ಸರಳ ಮಾಡಲಾಗುತ್ತಿದ್ದು ಜನ ಸಾಮಾನ್ಯರಿಗೆ ಸರ್ಕಾರ ಹತ್ತಿರವಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.