ರಾಮದಾಸ್ ಅಠಾವಳೆ
ಡೆಹ್ರಾಡೂನ್: ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವ ಬದಲು ಸಂಭಾಜಿನಗರದಲ್ಲಿ ಛತ್ರಪತಿ ಸಂಭಾಜಿ ಅವರ ಸ್ಮಾರಕವನ್ನು ನಿರ್ಮಿಸಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಡೆಹ್ರಾಡೂನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಔರಂಗಜೇಬನ ಸಮಾಧಿಯನ್ನು ತೆರವು ಮಾಡುವುದರಿಂದ ಏನೂ ಪರಿಹಾರವಾಗುವುದಿಲ್ಲ. ಅವರ ಸಮಾಧಿಯನ್ನು ತೆಗೆಯಬೇಡಿ. ಆದರೆ, ಸಂಭಾಜಿನಗರದಲ್ಲಿ ಛತ್ರಪತಿ ಸಂಭಾಜಿ ರಾಜೇ ಅವರ ದೊಡ್ಡ ಸ್ಮಾರಕ ನಿರ್ಮಿಸಬೇಕು’ ಎಂದು ಅವರು ತಿಳಿಸಿದ್ದಾರೆ.
ಔರಂಗಜೇಬನ ಸಮಾಧಿಯನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ರಕ್ಷಿಸಿದೆ ಎಂದು ಅಠಾವಳೆ ಹೇಳಿದ್ದಾರೆ.
ನಾವು ಸಂಭಾಜಿ ಮಹಾರಾಜ್ ಅವರ ಸಿದ್ಧಾಂತದೊಂದಿಗೆ ಮುಂದುವರಿಯಬೇಕು. ಆದರೆ, ದೇಶದಲ್ಲಿ ಶಾಂತಿ ನೆಲೆಸಬೇಕು ಎಂದು ಅವರು ತಿಳಿಸಿದ್ದಾರೆ.
ಛತ್ರಪತಿ ಸಂಭಾಜಿನಗರದ ಖುಲ್ದಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕೋರಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.