ADVERTISEMENT

ಗೋವಾ | ಸಿಎಎ ಅಡಿ ಭಾರತದ ಪೌರತ್ವ ಪಡೆದ ಪಾಕಿಸ್ತಾನ ಮೂಲದ ಕ್ರಿಶ್ಚಿಯನ್‌

ಪಿಟಿಐ
Published 25 ಆಗಸ್ಟ್ 2025, 14:31 IST
Last Updated 25 ಆಗಸ್ಟ್ 2025, 14:31 IST
   

ಪಣಜಿ: ಪೌರತ್ವ (ತಿದ್ದುಪಡಿ) ಕಾಯ್ದೆ–2019ರ ಅಡಿಯಲ್ಲಿ ಪಾಕಿಸ್ತಾನ ಮೂಲದ ಕ್ರೈಸ್ತ ಧರ್ಮಕ್ಕೆ ಸೇರಿದ ಬ್ರೆಂಡೆನ್ ವ್ಯಾಲೆಂಟೈನ್ ಕ್ರಾಸ್ಟೊ ಅವರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ರಾಜ್ಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ಹಾಜರಿದ್ದ ಕ್ರಾಸ್ಟೊ ಅವರಿಗೆ ಸಾವಂತ್ ಅವರು ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.

2006ರಲ್ಲಿ ಗೋವಾಕ್ಕೆ ಬಂದಿದ್ದ ಕ್ರಾಸ್ಟೊ ಅವರು, 2014ರಲ್ಲಿ ಭಾರತೀಯ ಪ್ರಜೆ ಮೆರಿಲಿನ್ ಫರ್ನಾಂಡಿಸ್ ಅವರನ್ನು ವಿವಾಹವಾದರು. ನಂತರ ಉತ್ತರ ಗೋವಾದ ಅಂಜುನಾದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.

ADVERTISEMENT

44 ವರ್ಷದ ಕ್ರಾಸ್ಟೊ, ಗೋವಾದಲ್ಲಿ ಸಿಎಎ ಕಾಯ್ದೆ ಅಡಿಯಲ್ಲಿ ಪೌರತ್ವ ಪಡೆದ ಮೂರನೇ ವ್ಯಕ್ತಿ ಆಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ – 2019, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಧರ್ಮಿಯರಿಗೆ ಭಾರತದ ಪೌರತ್ವ ಪಡೆಯುವುದನ್ನು ಸುಲಭಗೊಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.