ADVERTISEMENT

ಸಿಎಎ ಕುರಿತು ನನ್ನೊಂದಿಗೆ ಚರ್ಚಿಸಿ: ಅಮಿತ್‌ ಶಾಗೆ ಓವೈಸಿ ಸವಾಲು

ಪಿಟಿಐ
Published 22 ಜನವರಿ 2020, 19:41 IST
Last Updated 22 ಜನವರಿ 2020, 19:41 IST
ಅಸಾದುದ್ದೀನ್‌ ಓವೈಸಿ
ಅಸಾದುದ್ದೀನ್‌ ಓವೈಸಿ   

ಹೈದರಾಬಾದ್‌: ‘ಬೇರೆಯವರೊಂದಿಗೆ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ಕುರಿತು ಸಾರ್ವಜನಿಕವಾಗಿ ಚರ್ಚೆ ನಡೆಸುವ ಬದಲು ನನ್ನೊಂದಿಗೆ ಚರ್ಚೆ ನಡೆಸಿ’ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್‌ ಓವೈಸಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಎ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ತಮ್ಮೊಂದಿಗೆ ಚರ್ಚೆ ನಡೆಸಲಿ ಎಂದು ಅಮಿತ್‌ ಶಾ ಬಹಿರಂಗ ಸವಾಲು ಹಾಕಿದ ಬೆನ್ನಲ್ಲೆ ಒವೈಸಿ ಈ ಹೇಳಿಕೆ ನೀಡಿದ್ದಾರೆ.

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕರೀಂನಗರ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ನಾನು ಇಲ್ಲಿದ್ದೇನೆ. ನನ್ನೊಂದಿಗೆ ಚರ್ಚಿಸಿ, ಅವರೊಂದಿಗೆ ಯಾಕೆ ಚರ್ಚೆ. ಗಡ್ಡವಿರುವ ವ್ಯಕ್ತಿಯೊಂದಿಗೆ ಚರ್ಚಿಸಿ. ನಾವು ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಮಾತನಾಡುತ್ತೇವೆ ಮತ್ತು ಚರ್ಚಿಸುತ್ತೇವೆ’ ಎಂದು ಕುಟುಕಿದ್ದಾರೆ.

ADVERTISEMENT

ಪಾಕಿಸ್ತಾನ, ಅಮೆರಿಕ ಧರ್ಮಾಧಾರಿತ ರಾಷ್ಟ್ರ’: ಭಾರತೀಯ ಮೌಲ್ಯಗಳು ಎಲ್ಲ ಧರ್ಮಗಳನ್ನು ಸಮಾನವೆಂದು ಪರಿಗಣಿಸುತ್ತದೆ ಹಾಗಾಗಿ ನಮ್ಮದು ಜಾತ್ಯತೀತ ರಾಷ್ಟ್ರವಾಗಿದೆ. ನಾವು ಪಾಕಿಸ್ತಾನದಂತೆ ಧರ್ಮಾಧಾರಿತ ರಾಷ್ಟ್ರ(ದೇವರ ಹೆಸರಿನಲ್ಲಿ ಆಡಳಿತ ನಡೆಸುವ ಸರ್ಕಾರ) ಎಂದಿಗೂ ಆಗಲಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹೇಳಿದರು.

ದೆಹಲಿಯಲ್ಲಿ ನಡೆದ ಎನ್‌ಸಿಸಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಮಾತನಾಡಿದ ಅವರು, ‌‌‌ ‘ಧರ್ಮಗಳ ಆಧಾರದ ಮೇಲೆ ನಾವು (ಭಾರತ) ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದೇವೆ. ನಮ್ಮ ನೆರೆ ರಾಷ್ಟ್ರ ಅವರದ್ದು ಧರ್ಮಾಧಾರಿತ ದೇಶ ಎಂದು ಘೋಷಿಸಿಕೊಂಡಿದೆ. ನಾವು ಹಾಗೆ ಮಾಡಿಲ್ಲ’ ಎಂದರು.

‘ನಮ್ಮ ಸಂತರು ಮತ್ತು ದಾರ್ಶನಿಕರು ನಮ್ಮ ಗಡಿಯೊಳಗೆ ಇರುವವರನ್ನು ಮಾತ್ರವಲ್ಲ, ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.