ADVERTISEMENT

‘ಸಮಗ್ರ ಶಿಕ್ಷಣ ಯೋಜನೆ’: 5 ವರ್ಷ ಮುಂದುವರಿಕೆಗೆ ಕೇಂದ್ರ ಸಂಪುಟ ಅಸ್ತು

ಪಿಟಿಐ
Published 4 ಆಗಸ್ಟ್ 2021, 12:56 IST
Last Updated 4 ಆಗಸ್ಟ್ 2021, 12:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಸಮಗ್ರ ಶಿಕ್ಷಣ ಯೋಜನೆ’ಯನ್ನು ಮತ್ತೆ ಐದು ವರ್ಷಗಳ ಅವಧಿಗೆ ಮುಂದುವರಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತು.

‘ಈ ಯೋಜನೆ ಕಳೆದ ಏಪ್ರಿಲ್‌ 1ರಿಂದ 2026ರ ಮಾರ್ಚ್‌ 31ರ ವರೆಗೆ ಜಾರಿಯಲ್ಲಿರುವುದು. ಯೋಜನೆಯನ್ನು ‘ಸಮಗ್ರ ಶಿಕ್ಷಣ ಯೋಜನೆ–2’ ಎಂಬುದಾಗಿ ಕರೆಯಲಾಗುವುದು’ ಎಂದು ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಅನುರಾಗ್‌ ಠಾಕೂರ್‌ ತಿಳಿಸಿದರು.

ಯೋಜನಾ ಗಾತ್ರ ₹ 2,94,283.04 ಕೋಟಿ ಇದ್ದು, ಇದರಲ್ಲಿ ಕೇಂದ್ರ ಪಾಲು ₹ 1,85,398.32 ಕೋಟಿ ಇದೆ.

ADVERTISEMENT

ದೇಶದಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಒಟ್ಟು 11.60 ಲಕ್ಷ ಶಾಲೆಗಳು, 57 ಲಕ್ಷ ಶಿಕ್ಷಕರು ಹಾಗೂ 15.6 ಕೋಟಿ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದು, ಉತ್ತಮ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಗುರಿ ಹೊಂದಿದೆ ಎಂದು ಕೇಂದ್ರ ಶಿ್ಕ್ಷಣ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.