ADVERTISEMENT

ಸಿಎಂಗೂ ಒಂದು ಗಂಟೆ ಪ್ರಚಾರ ಮಾಡಲ್ಲ: ಟಿಎಂಸಿ ಸಂಸದೆಯ ವಿಡಿಯೊ ಹಂಚಿಕೊಂಡ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2021, 10:40 IST
Last Updated 29 ಮಾರ್ಚ್ 2021, 10:40 IST
ಪ್ರಚಾರದ ವೇಳೆ ಕೋಪದಿಂದ ವರ್ತಿಸುತ್ತಿರುವ ಸಂಸದೆ ನುಸ್ರತ್‌ ಜಯಾನ್‌
ಪ್ರಚಾರದ ವೇಳೆ ಕೋಪದಿಂದ ವರ್ತಿಸುತ್ತಿರುವ ಸಂಸದೆ ನುಸ್ರತ್‌ ಜಯಾನ್‌    

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ರೋಡ್ ಶೋ ವೇಳೆ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್‌ ಜಹಾನ್ ಕೋಪದಿಂದ ವರ್ತಿಸುತ್ತಿರುವ ವಿಡಿಯೊವೊಂದನ್ನು ಬಿಜೆಪಿ ಹಂಚಿಕೊಂಡಿದೆ. ಪಕ್ಷದ ಪರವಾಗಿ ಒಂದು ಗಂಟೆಗೂ ಹೆಚ್ಚುಕಾಲ ಪ್ರಚಾರ ನಡೆಸಿದ ನುಸ್ರತ್‌ ಜಹಾನ್‌ ಅವರು, ಮುಖಂಡರ ಮೇಲೆ ರೇಗಾಡಿರುವುದು ವಿಡಿಯೊದಲ್ಲಿದೆ.

'ನಾನು ಒಂದು ಗಂಟೆಗೂ ಹೆಚ್ಚು ಕಾಲದಿಂದ ಪ್ರಚಾರದಲ್ಲಿ ತೊಡಗಿದ್ದೇನೆ. ಮುಖ್ಯಮಂತ್ರಿಯವರಿಗೂ ಇಷ್ಟು ದೀರ್ಘ ಕಾಲ ನಾನು ಪ್ರಚಾರ ಮಾಡುವುದಿಲ್ಲ,' ಎಂದು ಜಹಾನ್‌ ಆಕ್ರೋಶದಿಂದ ಹೇಳಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ.

ವಾಹನವೊಂದರಲ್ಲಿ ನಿಂತಿರುವ ಸಂಸದೆ ನುಸ್ರತ್‌ ಜಹಾನ್‌ ಇನ್ನು ಪ್ರಚಾರ ನಡೆಸಲು ಇನ್ನು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಮುಖ್ಯರಸ್ತೆ ವರೆಗೆ ಪ್ರಚಾರ ನಡೆಸುವಂತೆ ಕೋರುವ ಮುಖಂಡರ ಕೋರಿಕೆಯನ್ನೂ ಅವರು ನಿರಾಕರಿಸುತ್ತಿರುವುದನ್ನು ಬಿಜೆಪಿ ಟ್ವೀಟ್‌ ಮಾಡಿರುವ 25 ಸೆಕೆಂಡ್‌ಗಳ ವಿಡಿಯೊದಲ್ಲಿ ಕಾಣಬಹುದು.

ADVERTISEMENT

'ಮುಖ್ಯ ರಸ್ತೆ ಸಮೀಪದಲ್ಲೇ ಇದೆ. ಇಲ್ಲಿಂದ ಕೇವಲ ಅರ್ಧ ಕಿಲೋಮೀಟರ್ ದೂರವಷ್ಟೆ,' ಎಂದು ಮುಖಂಡರೊಬ್ಬರು ಜಹಾನ್‌ ಅವರನ್ನು ಕೋರುತ್ತಾರೆ. ಜಹಾನ್‌ ಪ್ರಚಾರಕ್ಕೆ ನಿರಾಕರಿಸುತ್ತಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಏಪ್ರಿಲ್ 1ರಂದು ನಡೆಯಲಿದೆ. ಅಲ್ಲಿ ಒಟ್ಟು 8 ಹಂತಗಳ ಚುನಾವಣೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.