ADVERTISEMENT

ರಾಜಸ್ಥಾನ | ಹಸುವಿಗೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಕಾರು: ಇಬ್ಬರು ಸಾವು

ಪಿಟಿಐ
Published 15 ಜುಲೈ 2024, 9:30 IST
Last Updated 15 ಜುಲೈ 2024, 9:30 IST
   

ಜೈ‍ಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಸೋಮವಾರ ಕಾರೊಂದು ನದಿಗೆ ಬಿದ್ದು ಇಬ್ಬರು ಸಾವಿಗೀಡಾಗಿದ್ದಾರೆ.

ಭಾನುವಾರ ಸಂಜೆ ಖೇರ್‌ವಾಡದ ಜಲ್‌ಪಕ ಎಂಬಲ್ಲಿ ಈ ಘಟನೆ ನಡೆದಿದೆ. ಐವರು ಸ್ನೇಹಿತರು ದೇಗುಲವೊಂದಕ್ಕೆ ಭೇಟಿ ನೀಡಿ ಹಿಂದಿರುತ್ತಿದ್ದರು. ರಸ್ತೆ ತಿರುವಿನಲ್ಲಿ ಅಡ್ಡ ಬಂದ ಹಸುವಿಗೆ ಡಿಕ್ಕಿ ಹೊಡೆದು ಕಾರು ನದಿಗೆ ಬಿದ್ದಿದೆ.

ಮೂವರು ಕಾರಿನಿಂದ ಹೊರಗೆ ಬಂದಿದ್ದು, ಚಿರಾಗ್ ಮೇಘ್‌ವಾಲ್‌ (24) ಹಾಗೂ ತಿಕೇಶ್ ಮೀನಾ (25) ಕಾರಿನೊಳಗೆ ಸಿಲುಕಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.