ನವದೆಹಲಿ: ಮಕ್ಕಳನ್ನು ದತ್ತು ಪಡೆಯಲು ಹಂಬಲ ಇದ್ದರೂ ಕೋವಿಡ್–19 ಪಿಡುಗಿನಿಂದ ಸಾಧ್ಯವಾಗದೇ ಸಂಕಟಪಡುತ್ತಿರುವವರಿಗೆ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ) ಸಿಹಿ ಸುದ್ದಿ ನೀಡಿದೆ.
ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಲು ನಿಗದಿ ಮಾಡಿದ್ದ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿರುವ ಪ್ರಾಧಿಕಾರ, ಈ ಸಂಬಂಧ ರಾಜ್ಯಗಳ ದತ್ತು ಸಂಪನ್ಮೂಲ ಏಜೆನ್ಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ಪತ್ರ ಬರೆದಿದೆ.
ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸಹ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.