ADVERTISEMENT

ಪಳನಿ ದೇವಾಲಯದಲ್ಲಿ ವಿಜಯ್ ಸಿನಿಮಾ ಗೀತೆ ಪ್ರಸಾರ ಮಾಡಿದ ಯುವಕನ ವಿರುದ್ಧ ಕೇಸ್

ಪಿಟಿಐ
Published 13 ಫೆಬ್ರುವರಿ 2026, 7:50 IST
Last Updated 13 ಫೆಬ್ರುವರಿ 2026, 7:50 IST
ವಿಜಯ್
ವಿಜಯ್   

ಪಳನಿ: ದೇವಾಲಯದಲ್ಲಿ ಸಾರ್ವಜನಿಕ ಘೋಷಣೆಗಳನ್ನು ಹೊರಡಿಸುವುದಕ್ಕಾಗಿ ಅಳವಡಿಸಿರುವ ಧ್ವನಿವರ್ಧಕದಲ್ಲಿ ನಟ, ರಾಜಕಾರಣಿ ವಿಜಯ್‌ ಅವರ ಸಿನಿಮಾ ಹಾಡನ್ನು ಪ್ರಸಾರ ಮಾಡಿದ ಅಪರಿಚಿತ ಯುವಕನ ವಿರುದ್ಧ ಪಳನಿಯ ದಂಡಾಯುಧಪಾಣಿ ದೇವಸ್ಥಾನ ಆಡಳಿತವು ಪೊಲೀಸರಿಗೆ ಶುಕ್ರವಾರ ದೂರು ನೀಡಿದೆ.

ಬೆಟ್ಟದ ತಪ್ಪಲಿನಲ್ಲಿರುವ ದೇಗುಲಕ್ಕೆ ತೆರಳುವ 'ಆನೆ ಹಾದಿ' ಪ್ರದೇಶದಲ್ಲಿ ಯಾತ್ರಿಕರು ತೆರಳುವ ವೇಳೆ ಗೀತೆ ಪ್ರಸಾರವಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿವಾದ ಸೃಷ್ಟಿಯಾಗಿದೆ.

ಯುವಕನು ಧ್ವನಿವರ್ಧಕ ವ್ಯವಸ್ಥೆ ಇರುವಲ್ಲಿಗೆ ಭದ್ರತಾ ಸಿಬ್ಬಂದಿ ಇಲ್ಲದ ಹೊತ್ತಲ್ಲಿ ಅನುಮತಿ ಪಡೆಯದೆ ತೆರಳಿದ್ದ. ಆ ವೇಳೆ, ತನ್ನ ಮೊಬೈಲ್‌ ಮೂಲಕ ಹಾಡನ್ನು ಪ್ಲೇ ಮಾಡಿದ್ದಾನೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ADVERTISEMENT

‌ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 299ರ (ಧಾರ್ಮಿಕ ಭಾವನೆಗೆ ಧಕ್ಕೆ) ಅಡಿಯಲ್ಲಿ ಫೆಬ್ರುವರಿ 12ರಂದು ಪ್ರಕರಣ ದಾಖಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ದೇವಾಲಯದ ಆಡಳಿತ, ಭದ್ರತಾ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿ ಆಂತರಿಕ ತನಿಖೆಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.