ADVERTISEMENT

ಪಟಾಕಿ ಹೊಡೆದವರ ವಿರುದ್ಧ ದೂರು

ಪಿಟಿಐ
Published 7 ನವೆಂಬರ್ 2018, 19:35 IST
Last Updated 7 ನವೆಂಬರ್ 2018, 19:35 IST

ಮುಂಬೈ: ಸುಪ್ರೀಂ ಕೋರ್ಟ್‌ ನಿಗದಿ ಪಡಿಸಿರುವ ಸಮಯ ಮೀರಿ ಮಧ್ಯರಾತ್ರಿ ಪಟಾಕಿ ಸಿಡಿಸಿದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದಲ್ಲಿ ಇದು ಮೊದಲನೇ ಪ್ರಕರಣ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿ ಹಾಗೂ ಇತರೆ ಹಬ್ಬಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ ಸಮಯ ನಿಗದಿ ಮಾಡಿತ್ತು.

ಬಾಲಕಿ ಬಾಯೊಳಗೆ ಪಟಾಕಿ ಹೊಡೆದ ವ್ಯಕ್ತಿ: (ಲಖನೌ ವರದಿ) ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಿಲಾಕ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೂರು ವರ್ಷದ ಹುಡುಗಿ ಬಾಯಲ್ಲಿ ಪಟಾಕಿ ಇಟ್ಟು ಬೆಂಕಿ ಹಚ್ಚಿದ್ದಾನೆ. ಪಟಾಕಿ ಸ್ಫೋಟಗೊಂಡಿದ್ದರಿಂದ ಬಾಲಕಿ ಮುಖ ಛಿದ್ರವಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.