ADVERTISEMENT

‘ಜಾತಿ’ ನನ್ನ ದೊಡ್ಡ ರಾಜಕೀಯ ಪ್ರತಿಸ್ಪರ್ಧಿ: ಕಮಲ್ ಹಾಸನ್

ಪಿಟಿಐ
Published 12 ಫೆಬ್ರುವರಿ 2023, 11:31 IST
Last Updated 12 ಫೆಬ್ರುವರಿ 2023, 11:31 IST
ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್‌
ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್‌   

ಚೆನ್ನೈ: ಜಾತಿಯೇ ತಮ್ಮ 'ದೊಡ್ಡ' ರಾಜಕೀಯ ಪ್ರತಿಸ್ಪರ್ಧಿ ಎಂದು ಬಹುಭಾಷಾ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಭಾನುವಾರ ಹೇಳಿದ್ದಾರೆ.

ಮಕ್ಕಳ್ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್‌, ಇಲ್ಲಿನ "ನೀಲಂ ಬುಕ್ಸ್" ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

‘ನನ್ನ ದೊಡ್ಡ ಪ್ರತಿಸ್ಪರ್ಧಿ ಹಾಗೂ ರಾಜಕೀಯ ಪ್ರತಿಸ್ಪರ್ಧಿ ಎರಡೂ ಜಾತಿಯೇ ಆಗಿದೆ. ನಾನು 21 ವರ್ಷ ವಯಸ್ಸಿನಿಂದಲೂ ಇದನ್ನು ಹೇಳುತ್ತಿದ್ದೇನೆ. ನಾನು ಈಗಲೂ ಹೇಳುತ್ತಿದ್ದೇನೆ, ನನ್ನ ಅಭಿಪ್ರಾಯವು ಎಂದಿಗೂ ಬದಲಾಗಿಲ್ಲ’ ಎಂದು ಕಮಲ್ ಹೇಳಿದ್ದಾರೆ.

ADVERTISEMENT

‘ಚಕ್ರದ ನಂತರ ಮಾನವ ಮಾಡಿದ ಅತಿದೊಡ್ಡ ಆವಿಷ್ಕಾರ ದೇವರು. ಆದರೆ, ನಮ್ಮದೇ ಸೃಷ್ಟಿಯು ಒಂದು ವೇಳೆ ನಮ್ಮ ಮೇಲೆಯೇ ದಾಳಿ ಮಾಡಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ನಿರ್ದೇಶಕ ರಂಜಿತ್ ಅವರು ಮಾತನಾಡಿ, ನೀಲಂ ಪುಸ್ತಕ ಮಳಿಗೆಯನ್ನು ಸ್ಥಾಪಿಸಿದ ಉದ್ದೇಶ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಪುಸ್ತಕಗಳನ್ನು ಹೊರತರುವುದಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.