ADVERTISEMENT

ರೈಲ್ವೆ ಕೆಲಸಕ್ಕಾಗಿ ಭೂಮಿ ಪರಭಾರೆ ಹಗರಣ: ಲಾಲು ಆಪ್ತನ ಬಂಧನ

ಪಿಟಿಐ
Published 27 ಜುಲೈ 2022, 11:03 IST
Last Updated 27 ಜುಲೈ 2022, 11:03 IST
   

ನವದೆಹಲಿ (ಪಿಟಿಐ): ರೈಲ್ವೆ ಇಲಾಖೆಯಲ್ಲಿ ‘ಡಿ’ ದರ್ಜೆಯ ಕೆಲಸ ಕೊಡಿಸುವ ಸಲುವಾಗಿ ಉದ್ಯೋಗಕಾಂಕ್ಷಿಗಳಿಂದ ಭೂಮಿ ಪಡೆದು ಅದನ್ನು ಲಾಲುಪ್ರಸಾದ್‌ ಯಾದವ್‌ ಅವರ ಕುಟುಂಬ ಸದಸ್ಯರಿಗೆ ಪರಭಾರೆ ಮಾಡಿದ್ದ ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಆಪ್ತ ಭೋಲಾ ಯಾದವ್‌ ಎಂಬುವರನ್ನು ಸಿಬಿಐ ಬುಧವಾರ ಬಂಧಿಸಿದೆ.

ಭೋಲಾ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ (ದರ್ಭಾಂಗ ಮತ್ತು ಪಟ್ನಾ) ಸಿಬಿಐ ಅಧಿಕಾರಿಗಳು ಬುಧವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

‘ಲಾಲುಪ್ರಸಾದ್‌ ಅವರು ಯು‍ಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ (2005–2009) ಭೋಲಾ ಅವರು ಲಾಲು ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಅವರು ಉದ್ಯೋಗಕಾಂಕ್ಷಿಗಳ ಕುಟುಂಬಕ್ಕೆ ಸೇರಿದ ಭೂಮಿಯನ್ನು ಲಾಲು ಕುಟುಂಬದ ಸದಸ್ಯರಿಗೆ ಪರಭಾರೆ ಮಾಡುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿರುವ ಅನುಮಾನವಿದೆ’ ಎಂದು ಸಿಬಿಐ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.