ADVERTISEMENT

ಲಂಚದ ಆರೋಪ: ಗೋಕುಲ್‌ನಾಥ್ ವಿರುದ್ಧ ಸಿಬಿಐ ಪ್ರಕರಣ ದಾಖಲು

ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ ಪ್ರಮುಖ ಆರೋಪಿ

ಪಿಟಿಐ
Published 20 ಅಕ್ಟೋಬರ್ 2020, 7:09 IST
Last Updated 20 ಅಕ್ಟೋಬರ್ 2020, 7:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬ್ಯಾಂಕ್ ಗ್ಯಾರಂಟಿ ವ್ಯವಸ್ಥೆ ಮಾಡಿಕೊಡಲು ಕಂಪನಿಯೊಂದರಿಂದ ಲಂಚ ಪಡೆದ ಆರೋಪದ ಅಡಿ, ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್‌ನಾಥ್ ಶೆಟ್ಟಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಗೀಜಾಂಲಿ ಜಮ್ಸ್‌ ಕಂಪನಿಗೆ ಬ್ಯಾಂಕ್ ಗ್ಯಾರಂಟಿ ವ್ಯವಸ್ಥೆ ಮಾಡಲು ರಿಷಿಕಾ ಫೈನಾನ್ಷಿಯಲ್ಸ್‌ನಿಂದ ₹1.08 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪ ಶೆಟ್ಟಿ ಮೇಲಿತ್ತು.

ಶೆಟ್ಟಿ ಅವರು ವಿದೇಶಿ ಧನ ಸಹಾಯ ನಿಡುವ ಬ್ಯಾಂಕ್‌ಗಳಿಂದ ಕಂಪನಿಗಳಿಗೆ ಕೋಟ್ಸ್ ಆಫ್‌ ಲೆಟರ್ಸ್‌ ಅಂಡರ್‌ ಟೇಕಿಂಗ್‌(ಎಲ್ಒಯು) ವ್ಯವಸ್ಥೆ ಮಾಡಿಕೊಡುವ ವ್ಯವಹಾರ ನಡೆಸುತ್ತಿದ್ದರು ಎಂದುರಿಷಿಕಾ ಫೈನಾನ್ಷಿಯಲ್ಸ್‌ನ ದೇವಜ್ಯೋತಿ ದತ್ತಾ ಆರೋಪಿಸಿದ್ದಾರೆ.

ADVERTISEMENT

ದತ್ತಾ ಅವರಿಂದ ಖಚಿತ ಮಾಹಿತಿ ಪಡೆದ ನಂತರ ಶೆಟ್ಟಿ ಅವರು ಅಂತರಾಷ್ಟ್ರೀಯ ಬ್ಯಾಂಕಿಂಗ್ ಮೆಸೇಜಿಂಗ್ ಸರ್ವೀಸ್ ಬಳಸಿ ಎಲ್‌ಒಯುಗಳನ್ನು ಕೊಡಿಸುತ್ತಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.