ADVERTISEMENT

ವಂಚನೆ ಪ್ರಕರಣ: ಯುನಿಟೆಕ್ ಎಂಡಿ ಸಂಜಯ್‌ ಚಂದ್ರ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಏಜೆನ್ಸೀಸ್
Published 7 ಡಿಸೆಂಬರ್ 2020, 6:10 IST
Last Updated 7 ಡಿಸೆಂಬರ್ 2020, 6:10 IST
   

ನವದೆಹಲಿ: ಕೆನರಾ ಬ್ಯಾಂಕ್‌ಗೆ ₹ 198 ಕೋಟಿ ವಂಚಿಸಿದ ಆರೋಪದ ಮೇಲೆ ರಿಯಲ್‌ ಎಸ್ಟೇಟ್‌ ಕಂಪೆನಿ ಯುನಿಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಚಂದ್ರ ಹಾಗೂ ಅವರ ತಂದೆ ರಮೇಶ್‌ ಮತ್ತು ಸಹೋದರ ಅಜಯ್‌ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಹೊಸ ಪ್ರಕರಣ ದಾಖಲಿಸಿದೆ.

ಸಂಜಯ್‌ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಯುನಿಟೆಕ್‌, ದೆಹಲಿ ಪೊಲೀಸರು, ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಹಲವು ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿದೆ. 2ಜಿ ಸ್ಪೆಕ್ಟ್ರಮ್‌ ಹಗರಣದಲ್ಲಿಯೂ ಸಂಜಯ್‌ ಪಾತ್ರವಿದೆ ಎನ್ನಲಾಗಿದೆಯಾದರೂ, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

ADVERTISEMENT

ಕಳೆದ 43 ತಿಂಗಳುಗಳಿಂದ ತಿಹಾರ್‌ ಜೈಲಿನಲ್ಲಿದ್ದ ಸಂಜಯ್‌, ದೆಹಲಿ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದರು.ವಂಚನೆಗೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್ ಸಿಬಿಐಗೆ ದೂರು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.