ADVERTISEMENT

ಡಿ.29ರ ವರೆಗೂ ಕೊಚ್ಚರ್‌ ದಂಪತಿ ಸಿಬಿಐ ವಶಕ್ಕೆ

ಪಿಟಿಐ
Published 28 ಡಿಸೆಂಬರ್ 2022, 14:32 IST
Last Updated 28 ಡಿಸೆಂಬರ್ 2022, 14:32 IST
ಚಂದಾ ಕೊಚ್ಚರ್
ಚಂದಾ ಕೊಚ್ಚರ್   

ಮುಂಬೈ (ಪಿಟಿಐ):ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಮತ್ತು ಎಂ.ಡಿ. ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್ ಹಾಗೂ ವಿಡಿಯೊಕಾನ್‌ ಸಮೂಹದ ವೇಣುಗೋಪಾಲ್ ಧೂತ್ ಅವರ ಸಿಬಿಐ ಕಸ್ಟಡಿ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಡಿ.29ರ ವರೆಗೆ ವಿಸ್ತರಿಸಿದೆ.

ಮೂವರನ್ನು ಬುಧವಾರ ವಿಶೇಷ ನ್ಯಾಯಾಧೀಶ ಎಸ್‌.ಎಂ.ಮೆನ್ಜೋಗೆ ಅವರ ಎದುರು ಹಾಜರುಪಡಿಸಲಾಗಿತ್ತು. ಈ ವೇಳೆ ಹೆಚ್ಚಿನ ವಿಚಾರಣೆಗೆ ಇನ್ನೂ ಎರಡು ದಿನ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿತು. ಎರಡೂ ಕಡೆಯ ವಾದ ಆಲಿಸಿದ ಕೋರ್ಟ್‌, ಡಿ.29ರ ವರೆಗೆ ಮೂವರನ್ನು ಸಿಬಿಐ ವಶಕ್ಕೆ ನೀಡಿ ಆದೇಶಿಸಿತು.

ಅಕ್ರಮ ಸಾಲ ಮಂಜೂರಾತಿ ಪ್ರಕರಣದಲ್ಲಿ ಸಿಬಿಐ, ಕಳೆದ ಶುಕ್ರವಾರ ಕೊಚ್ಚರ್‌ ದಂಪತಿಯನ್ನು ಮತ್ತು ಸೋಮವಾರ ವೇಣುಗೋಪಾಲ್‌ ಅವರನ್ನು ಬಂಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.