ADVERTISEMENT

ರಸಗೊಬ್ಬರ ಅಕ್ರಮ: ಇಫ್ಕೊ ಮಾಜಿ ಎಂ.ಡಿ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು

ಪಿಟಿಐ
Published 19 ಮೇ 2021, 11:20 IST
Last Updated 19 ಮೇ 2021, 11:20 IST
ಸಿಬಿಐ ಲೋಗೊ
ಸಿಬಿಐ ಲೋಗೊ   

ನವದೆಹಲಿ: ರಸಗೊಬ್ಬರ ಆಮದು ಮತ್ತು ಸಬ್ಸಿಡಿ ಪಡೆಯುವಲ್ಲಿ ಅವ್ಯವಹಾರ ಎಸಗಿದ ಆರೋಪದ ಮೇರೆಗೆ ಇಂಡಿಯನ್ ಫಾರ್ಮರ್ಸ್ ಫೈರ್ಟಿಲೈಸರ್ ಕೋ ಆಪರೇಟಿವ್ ಲಿ. (ಐಎಫ್‌ಎಫ್‌ಸಿಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಯು.ಎಸ್. ಅವಸ್ಥಿ ಮತ್ತು ಇಂಡಿಯನ್ ಪೊಟ್ಯಾಷ್ ಲಿ. ಮಾಜಿ ವ್ಯವಸ್ಥಾಪಕ ನಿರ್ದೇಶಕ ಪರ್ವಿಂದರ್ ಸಿಂಗ್ ಗಹ್ಲಾತ್ ಹಾಗೂ ಅವರ ಮಕ್ಕಳು ಸೇರಿದಂತೆ ಇತರರ ವಿರುದ್ಧ ಕೇಂದ್ರ ತನಿಖಾ ದಳವು (ಸಿಬಿಐ) ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಎಫ್ಐಆರ್ ದಾಖಲಾದ ಬಳಿಕ ಸಿಬಿಐ ಅವಸ್ಥಿ ಮತ್ತು ಗಹ್ಲಾತ್ ಅವರಿಗೆ ಸಂಬಂಧಿಸಿದಂತೆ ದೆಹಲಿ, ಮುಂಬೈ, ಗುರುಗ್ರಾಮ ಸೇರಿದಂತೆ 12 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ.

ಅವಸ್ಥಿಯ ಪುತ್ರರಾದ ಕ್ಯಾಟಲಿಸ್ಟ್ ಬಿಸಿನೆಸ್ ಅಸೋಸಿಯೇಟ್‌ನ ಪ್ರವರ್ತಕ ಅಮೋಲ್ ಮತ್ತು ಕ್ಯಾಟಲಿಸ್ಟ್ ಬಿಸಿನೆಸ್ ಸೊಲ್ಯೂಷನ್ಸ್‌ನ ಪ್ರವರ್ತಕ ಅನುಪಮ್ ಅವರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ.

ADVERTISEMENT

‘ದುಬೈನ ಕಿಸಾನ್ ಅಂತರರಾಷ್ಟ್ರೀಯ ಟ್ರೇಡಿಂಗ್ ಎಫ್‌ಝಡ್‌ಇ (ಇಫ್ಕೊದ ಅಂಗಸಂಸ್ಥೆ) ಮತ್ತು ಇತರ ಮಧ್ಯವರ್ತಿಗಳ ಮೂಲಕ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಆರೋಪಿಗಳು, ಅದಕ್ಕೆ ಸರ್ಕಾರದಿಂದ ಹೆಚ್ಚಿನ ಸಬ್ಸಿಡಿ ಪಡೆದು ಸರ್ಕಾರಕ್ಕೇ ಮೋಸ ಮಾಡುತ್ತಿದ್ದರು’ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.