ADVERTISEMENT

ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್‌ ದೇಶಮುಖ್ ನಿವಾಸದಲ್ಲಿ ಸಿಬಿಐ ಶೋಧ

ಪಿಟಿಐ
Published 24 ಏಪ್ರಿಲ್ 2021, 10:32 IST
Last Updated 24 ಏಪ್ರಿಲ್ 2021, 10:32 IST
ಮಾಜಿ ಸಚಿವ ಅನಿಲ್ ದೇಶ್‌ಮುಖ್‌
ಮಾಜಿ ಸಚಿವ ಅನಿಲ್ ದೇಶ್‌ಮುಖ್‌   

ನಾಗಪುರ: ಭ್ರಷ್ಟಾಚಾರಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್ ಅವರ ನಿವಾಸಿಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

ಶುಕ್ರವಾರ ರಾತ್ರಿ ನಾಗಪುರಕ್ಕೆ ಬಂದಿಳಿದ ಸಿಬಿಐ ತಂಡ, ಶನಿವಾರ ಬೆಳಿಗ್ಗೆ ನಾಗಪುರದಲ್ಲಿ ಸಿವಿಲ್‌ ಲೈನ್ಸ್‌ ಪ್ರದೇಶದ ಜಿಪಿಒ ಚೌಕದಲ್ಲಿರುವ ಸಚಿವರ ನಿವಾಸದಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಗಪುರದಿಂದ 60 ಕಿ.ಮೀ ದೂರದಲ್ಲಿರುವ ದೇಶಮುಖ್‌ ಅವರ ವಿಧಾನಸಭಾ ಕ್ಷೇತ್ರದ ಕಟೋಲ್ ಪಟ್ಟಣಕ್ಕೂ ತಂಡ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಾಡಿರುವ ಲಂಚದ ಆರೋಪಗಳನ್ನು ಪರಿಶೀಲಿಸುವಂತೆ ಬಾಂಬೆ ಹೈಕೋರ್ಟ್‌ ಆದೇಶಿತ್ತು. ಈ ಆದೇಶದ ಮೇರೆಗೆ ಸಿಬಿಐ ಪ್ರಾಥಮಿಕ ತನಿಖೆ ನಡೆಸುವ ಜತೆಗೆ, ದೇಶಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ದೇಶಮುಖ್ ಅವರ ಮುಂಬೈನ ನಿವಾಸ ಮತ್ತಿತರ ಸ್ಥಳಗಳಲ್ಲೂ ಸಿಬಿಐ ಶೋಧಕಾರ್ಯ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.