ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ನವದೆಹಲಿ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಶೇ 93.66ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
12ನೇ ತರಗತಿಯಂತೆ, ಈ ಪರೀಕ್ಷೆಯಲ್ಲಿ ಕೂಡ ಬಾಲಕಿಯರು ಬಾಲಕರನ್ನು ಹಿಂದಿಕ್ಕಿದ್ದಾರೆ. ಈ ಬಾರಿ ಬಾಲಕರಿಗಿಂತ ಬಾಲಕಿಯರ ತೇರ್ಗಡೆ ಪ್ರಮಾಣ ಶೇ 2ರಷ್ಟು ಅಧಿಕ ಇದೆ ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಮಂಗಳವಾರ ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಒಟ್ಟಾರೆ ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ. ಕಳೆದ ವರ್ಷದ ಫಲಿತಾಂಶ 93.60ರಷ್ಟು ಇತ್ತು.
23,71,939 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ, ಒಂದು ಅಥವಾ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ 1.41 ಲಕ್ಷ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.
* ಶೇ 95 ತೇರ್ಗಡೆಯಾಗಿರುವ ಬಾಲಕಿಯರ ಪ್ರಮಾಣ
* ಶೇ 92.63 ತೇರ್ಗಡೆಯಾಗಿರುವ ಬಾಲಕರ ಪ್ರಮಾಣ
* ಶೇ 95 ತೇರ್ಗಡೆಯಾಗಿರುವ ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರಮಾಣ
* 45516 ಶೇ 95ಕ್ಕಿಂತಲೂ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ
* 1.99 ಲಕ್ಷ ಶೇ 90ಕ್ಕೂ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಂಖ್ಯೆ
ಪ್ರದೇಶವಾರು ಫಲಿತಾಂಶ
1 ತಿರುವನಂತಪುರ –99.79
2 ವಿಜಯವಾಡ 99.79
3 ಬೆಂಗಳೂರು 98.90
4 ಚೆನ್ನೈ 98.71
5 ಪುಣೆ 96.54
6 ಅಜ್ಮೀರ್ 95.44
7 ದೆಹಲಿ ಪಶ್ಚಿಮ 95.24
8 ದೆಹಲಿ ಪೂರ್ವ 95.07
9 ಚಂಡೀಗಢ 93.71
10 ಪಂಚಕುಲ 92.77
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.