ADVERTISEMENT

ಎಲ್ಲ ತರಗತಿಗೆ ಕಲಾ ಶಿಕ್ಷಣ ಕಡ್ಡಾಯ: ಸಿಬಿಎಸ್‌ಇ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 20:30 IST
Last Updated 11 ಏಪ್ರಿಲ್ 2019, 20:30 IST

ನವದೆಹಲಿ: ಎಲ್ಲ ತರಗತಿಗಳಿಗೆ ಒಂದು ಕಲಾ ವಿಷಯ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಹೇಳಿದೆ. ಅಲ್ಲದೆ, 6ರಿಂದ 8ನೆಯ ತರಗತಿಗಳಿಗೆ ಹೊಸದಾಗಿ ಪಾಕ ಕಲೆ (ಅಡುಗೆ) ವಿಷಯವನ್ನು ಕಲಿಸಬೇಕು ಎಂದು ಪ್ರೌಢಶಾಲೆಗಳಿಗೆ ಸೂಚನೆ ನೀಡಿದೆ.

‘ಎಲ್ಲ ತರಗತಿಗಳಿಗೆ ಒಂದು ಕಲಾ ಶಿಕ್ಷಣವನ್ನು (ಸಂಗೀತ, ನೃತ್ಯ, ದೃಶ್ಯಕಲೆ ಮತ್ತು ರಂಗಭೂಮಿ) ಕಡ್ಡಾಯವಾಗಿ ಕಲಿಸಬೇಕು ಹಾಗೂ ವಾರದಲ್ಲಿ ಎರಡು ಪೀರಿಯಡ್‌ಗಳನ್ನು ಇದಕ್ಕಾಗಿ ಮೀಸಲಿರಿಸಬೇಕು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಪೌಷ್ಟಿಕ ಆಹಾರದ ಮಹತ್ವ, ಭಾರತದಲ್ಲಿ ಬೆಳೆಯುವ ದವಸ–ಧಾನ್ಯಗಳು, ಬೀಜಗಳಿಂದ ಉತ್ಪಾದಿಸುವ ವಿವಿಧ ಬಗೆಯ ಎಣ್ಣೆಗಳು ಹಾಗೂ ಕೃಷಿ ಬಗ್ಗೆ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ 6ರಿಂದ 8ನೆಯ ತರಗತಿಯ ವಿದ್ಯಾರ್ಥಿಗಳಿಗೆ ‘ಅಡುಗೆ ಕಲೆ’ಯನ್ನು ಒಂದು ವಿಷಯವಾಗಿ ಬೋಧಿಸಲು ಉದ್ದೇಶಿಸಲಾಗಿದೆ‘ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.