ADVERTISEMENT

ಸಿಬಿಎಸ್‌ಇ: ಕಟ್ಟಡದ ಒಟ್ಟು ವಿಸ್ತೀರ್ಣ ಆಧರಿಸಿ ತರಗತಿಗಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 19:04 IST
Last Updated 31 ಜುಲೈ 2025, 19:04 IST
   

ನವದೆಹಲಿ: ‘ಶಾಲೆಯ ಕಟ್ಟಡದ ಒಟ್ಟು ವಿಸ್ತೀರ್ಣ ಆಧರಿಸಿ ಗರಿಷ್ಠ ತರಗತಿ ನಡೆಸಲು ಅವಕಾಶ ನೀಡಲು ಸಿಬಿಎಸ್‌ಇ ತನ್ನ ಬೈಲಾಕ್ಕೆ ತಿದ್ದುಪಡಿ ತಂದಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾಲೆಗಳಲ್ಲಿ ಮಾಧ್ಯಮಿಕ ಹಾಗೂ ಹಿರಿಯ ಮಾಧ್ಯಮಿಕ ಮಟ್ಟದಲ್ಲಿಯೂ ಸಮಾನ ಸಂಖ್ಯೆಯ ತರಗತಿಗಳನ್ನು ನಡೆಸಬೇಕು ಎಂದು ಮಂಡಳಿ ನಿರ್ಧರಿಸಿದೆ.

‘ಶಾಲಾ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟವರಿಂದ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಜಾಗದ ಕೊರತೆಇರುವ ಶಾಲೆಗಳಲ್ಲಿ ಅನುಮತಿ ಮೀರಿಹೆಚ್ಚುವರಿ ತರಗತಿಗಳನ್ನು ಆರಂಭಿಸಿದರೆ, ನಿರ್ವಹಣೆ ಕಷ್ಟ. ಅಲ್ಲದೇ, ಭೂಮಿಯ ಕೊರತೆಯಿಂದ ಹೆಚ್ಚುವರಿ ತರಗತಿಗಳನ್ನು ಆರಂಭಿಸಲು ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.