ADVERTISEMENT

ಸಿಬಿಎಸ್‌ಇ: ಇಂದಿನಿಂದ ಮೌಲ್ಯಮಾಪನ

​ಪ್ರಜಾವಾಣಿ ವಾರ್ತೆ
Published 9 ಮೇ 2020, 20:19 IST
Last Updated 9 ಮೇ 2020, 20:19 IST
   

ನವದೆಹಲಿ: ಸಿಬಿಎಸ್‌ಇ ಹತ್ತನೇ ಮತ್ತು 12ನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಭಾನುವಾರದಿಂದ (ಮೇ 10) ಆರಂಭವಾಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಶನಿವಾರ ತಿಳಿಸಿದರು.

‘ಅಂದಾಜು 2.5 ಕೋಟಿ ಉತ್ತರ ಪತ್ರಿಕೆಗಳಿದ್ದು, ಮೌಲ್ಯಮಾಪಕರ ಮನೆಗೇ ಇವುಗಳನ್ನು ತಲುಪಿಸಲಾಗುವುದು. ಮುಂದಿನ 50 ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 3000 ಶಾಲೆಗಳಲ್ಲಿ ಮೌಲ್ಯಮಾಪನಕ್ಕೆ ಅನುಮತಿ ನೀಡಲಾಗಿದೆ. 173 ಪಠ್ಯ ವಿಷಯಗಳ 1.5 ಕೋಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶೀಘ್ರ ಮುಗಿಯಲಿದೆ’ ಎಂದು ನಿಶಾಂಕ್‌ ತಿಳಿಸಿದರು.

‘ಬಾಕಿ ಉಳಿದಿರುವ 29 ಪಠ್ಯ ವಿಷಯಗಳ ಪರೀಕ್ಷೆಯು ಜುಲೈ 1ರಿಂದ 15ರವರೆಗೆ ನಡೆಯಲಿದ್ದು, ಇವುಗಳ ಮೌಲ್ಯಮಾಪನವನ್ನೂ ಶೀಘ್ರದಲ್ಲೇ ಮುಗಿಸಲಾಗುವುದು’ ಎಂದರು.

ADVERTISEMENT

10ನೇ ತರಗತಿ ಪರೀಕ್ಷೆಗೆ 18 ಲಕ್ಷ ವಿದ್ಯಾರ್ಥಿಗಳು ಹಾಗೂ 12ನೇ ತರಗತಿ ಪರೀಕ್ಷೆಗೆ 12 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.