ADVERTISEMENT

ಸಮುದಾಯ ರೇಡಿಯೊ ಸ್ಥಾಪನೆಗೆ ಸಿಬಿಎಸ್ಇ ಸಜ್ಜು

ಪಿಟಿಐ
Published 10 ಆಗಸ್ಟ್ 2025, 12:42 IST
Last Updated 10 ಆಗಸ್ಟ್ 2025, 12:42 IST
Central Board of Secondary Education (CBSE).
Central Board of Secondary Education (CBSE).   

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶೀಘ್ರದಲ್ಲೇ ತನ್ನ ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿಶೇಷ ಸಮುದಾಯ ರೇಡಿಯೊ ಕೇಂದ್ರ ಸ್ಥಾಪಿಸಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿಗೆ ನಡೆದ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಪರವಾನಗಿ ಹಾಗೂ ಇತರೆ ಕೆಲಸಕ್ಕೆ ಮಂಡಳಿ ಆರ್ಥಿಕ ನೆರವು ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ಸಿಬಿಎಸ್ಇ ಮಂಡಳಿ ಶಿಕ್ಷಾ ವಾಣಿ ಎಂಬ ಪಾಡ್‌ಕಾಸ್ಟ್  ಪ್ರಸಾರ ಮಾಡುತ್ತಿದೆ. 9 ರಿಂದ 12ನೇ ತರಗತಿಯ ವಿವಿಧ ವಿಷಯಗಳಿಗೆ ಶೈಕ್ಷಣಿಕ ಪಾಠಗಳನ್ನು ಬಿತ್ತರಿಸುತ್ತಿದೆ.

ADVERTISEMENT

ಶಿಕ್ಷಾ ವಾಣಿ ಆ್ಯಪ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಇದುವರೆಗೆ NCERT ಪಠ್ಯಕ್ರಮದ ಅನುಸಾರ ನೂರಾರು ಪಾಠಗಳನ್ನು ಬಿತ್ತರ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.