ADVERTISEMENT

ಕಾನೂನು ಉಲ್ಲಂಘನೆ| ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ತನಿಖೆಗೆ ಆದೇಶಿಸಿದ ಸಿಸಿಐ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 15:05 IST
Last Updated 13 ಜನವರಿ 2020, 15:05 IST
ಇ–ಕಾಮರ್ಸ್‌
ಇ–ಕಾಮರ್ಸ್‌   

ನವದೆಹಲಿ: ಮಾರುಕಟ್ಟೆ ಸ್ಪರ್ಧೆಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸೋಮವಾರ ತನಿಖೆಗೆ ಆದೇಶಿಸಿದೆ.

‘ಮೊಬೈಲ್‌ ಫೋನ್‌ ಬ್ರ್ಯಾಂಡ್‌ ಮತ್ತು ಇ–ಕಾಮರ್ಸ್‌ ವೇದಿಕೆಗಳ ನಡುವೆ ವಿಶೇಷ ಒಪ್ಪಂದವೊಂದು ಏರ್ಪಟ್ಟಿದೆ. ಕೆಲವೊಂದು ಮೊಬೈಲ್‌ ಕಂಪನಿಗಳಿಗೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳುಹೆಚ್ಚಿನ ಆದ್ಯತೆ ನೀಡಲಾಗುತ್ತಿದೆಎನ್ನುವ ದೂರು ಬಂದಿದ್ದು, ಆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ಆಯೋಗ ತಿಳಿಸಿದೆ.

ಈ ತನಿಖೆ ಆದೇಶದಿಂದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗೆ ಭಾರಿಹಿನ್ನಡೆಯಾಗಿದೆ. ಈ ಹಿಂದೆ ಭಾರತೀಯ ಇಟ್ಟಿಗೆ ಮತ್ತು ಗಾರೆ ವ್ಯಾಪಾರ ಕಂಪನಿಗಳುಇ–ಕಾಮರ್ಸ್ ವೇದಿಕೆಗಳ ವಿರುದ್ಧ ವಿದೇಶಿ ಹೂಡಿಕೆ ನಿಯಮ ಉಲ್ಲಂಘನೆಯ ಆರೋಪ ಮಾಡಿದ್ದವು.

ADVERTISEMENT

ಆದರೆ, ಈಗಿನ ಆರೋಪವನ್ನು ಎರಡೂ ಕಂಪನಿಗಳು ಅಲ್ಲಗಳೆದಿದ್ದು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.