ADVERTISEMENT

ಶ್ರೀಹರಿಕೋಟದಲ್ಲಿ ಮೂರನೇ ಲಾಂಚ್ ಪ್ಯಾಡ್‌ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ

ಪಿಟಿಐ
Published 16 ಜನವರಿ 2025, 10:40 IST
Last Updated 16 ಜನವರಿ 2025, 10:40 IST
<div class="paragraphs"><p>ಕೃಪೆ: ಇಸ್ರೊ</p></div>

ಕೃಪೆ: ಇಸ್ರೊ

   

ನವದೆಹಲಿ: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ₹ 3,985 ವೆಚ್ಚದಲ್ಲಿ ಮೂರನೇ ಲಾಂಚ್ ಪ್ಯಾಡ್‌ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಇಸ್ರೋದ ಮುಂದಿನ ತಲೆಮಾರಿನ ಉಡ್ಡಯನ ವಾಹನಗಳಿಗೆ ಮೂಲಸೌಕರ್ಯವನ್ನು ಒದಗಿಸಲು ಮತ್ತು ಶ್ರೀಹರಿಕೋಟಾದಲ್ಲಿನ ಎರಡನೇ ಉಡಾವಣಾ ಪ್ಯಾಡ್‌ಗೆ ಸ್ಟ್ಯಾಂಡ್‌ಬೈ ಪ್ಯಾಡ್‌ ಆಗಿ ಇದು ಕಾರ್ಯನಿರ್ವಹಿಸಲಿದೆ.

ADVERTISEMENT

ಇದು ಭವಿಷ್ಯದ ಭಾರತದ ಮಾನವ ಸಹಿತ ಬಾಹ್ಯಾಕಾಶ ಯಾನಗಳ ಉಡ್ಡಯನ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಸರ್ಕಾರ ತಿಳಿಸಿದೆ.

ಉದ್ದೇಶಿಸಲಾಗಿರುವ ಮೂರನೇ ಲಾಂಚ್‌ ಪ್ಯಾಡ್ ಅನ್ನು NGLV ಮಾತ್ರವಲ್ಲದೆ, LVM3 ವಾಹನಗಳನ್ನು ಉಡ್ಡಯನ ಮಾಡುವಂತೆ ವಿನ್ಯಾಸಗೊಳಿಸಲಾಗುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.