ADVERTISEMENT

ಸೆಂಟ್ರಲ್‌ ವಿಸ್ತಾ ಅವೆನ್ಯೂ ಪುನರ್‌ ಅಭಿವೃದ್ಧಿ ಕಾಮಗಾರಿ 18ರೊಳಗೆ ಪೂರ್ಣ: ಪುರಿ

ಪಿಟಿಐ
Published 7 ಜುಲೈ 2022, 14:07 IST
Last Updated 7 ಜುಲೈ 2022, 14:07 IST
ಹರ್ದೀಪ್‌ ಸಿಂಗ್‌ ಪುರಿ
ಹರ್ದೀಪ್‌ ಸಿಂಗ್‌ ಪುರಿ   

ನವದೆಹಲಿ: ಸೆಂಟ್ರಲ್‌ ವಿಸ್ತಾ ಅವೆನ್ಯೂ ಪುನರ್‌ ಅಭಿವೃದ್ಧಿ ಯೋಜನೆಯಡಿ ವಿಜಯ ಚೌಕ್‌ನಿಂದ ಇಂಡಿಯಾ ಗೇಟ್‌ ವರೆಗಿನ ಕಾಮಗಾರಿಯನ್ನು ಇದೇ 18ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಹೇಳಿದ್ದಾರೆ.

‘ಒಂದೆರಡು ಅಂಡರ್‌ಪಾಸ್‌ಗಳಲ್ಲಿ ಕೆಲ ಸಣ್ಣ ಕಾಮಗಾರಿಗಳು ನಡೆಯುತ್ತಿವೆ. ಹೀಗಾಗಿ, ಪುನರ್‌ ಅಭಿವೃದ್ಧಿ ಕಾಮಗಾರಿಯನ್ನು ಜುಲೈ 15 ಅಥವಾ 18ರ ಒಳಗಾಗಿ ಪೂರ್ಣಗೊಳಿಸಲಾಗುವುದು’ ಎಂದರು.

ಸೆಂಟ್ರಲ್ ವಿಸ್ತಾ ಪುನರ್‌ಅಭಿವೃದ್ಧಿ ಯೋಜನೆಯು ತ್ರಿಕೋನಾಕಾರದ ನೂತನ ಸಂಸತ್‌ ಭವನ, ವಿಜಯ ಚೌಕ್‌ನಿಂದ ಇಂಡಿಯಾ ಗೇಟ್‌ ವರೆಗಿನ 3 ಕಿ.ಮೀ. ಉದ್ದದ ರಾಜಪಥದ ಅಭಿವೃದ್ಧಿ, ಪ್ರಧಾನಿಯ ನೂತನ ನಿವಾಸ, ಕಚೇರಿ ಹಾಗೂ ಉಪರಾಷ್ಟ್ರಪತಿಗಳ ನೂತನ ಕಚೇರಿ ಸಂಕೀರ್ಣ ನಿರ್ಮಾಣವನ್ನು ಒಳಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.