ADVERTISEMENT

ನೂತನ ಸಂಸತ್‌ ಭವನ ಜಾಗದ ಎರಡು ನಿವೇಶನಗಳಲ್ಲಿ ಪ್ರಧಾನಿ ಕಚೇರಿ

Central Vista

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 6:46 IST
Last Updated 3 ಮಾರ್ಚ್ 2021, 6:46 IST
.
.   

ನವದೆಹಲಿ: ನೂತನ ಸಂಸತ್‌ ಭವನ ನಿರ್ಮಾಣಕ್ಕಾಗಿ ಮೀಸಲಾಗಿರುವ ಜಾಗದ ಎರಡು ನಿವೇಶನಗಳಲ್ಲಿ ಪ್ರಧಾನ ಮಂತ್ರಿ ಕಚೇರಿಯನ್ನು ಸಹ ನಿರ್ಮಿಸಲು ಉದ್ದೇಶಿಸಲಾಗಿದೆ.

ದೆಹಲಿ ಅಭಿವೃದ್ಧಿ ಪ್ರಾಧಿಕಾರ ಈಗಿರುವ ಭೂಮಿಯ ಬಳಕೆಯನ್ನು ಬದಲಾಯಿಸಲು ಯೋಜನೆ ರೂಪಿಸಿದೆ. ಕಳೆದ ವಾರ ಈ ಬಗ್ಗೆ ‘ಸಾರ್ವಜನಿಕ ನೋಟಿಸ್‌’ ಅನ್ನು ಪ್ರಕಟಿಸಿದೆ. ಮೋತಿಲಾಲ್‌ ನೆಹರೂ ಮಾರ್ಗ ಮತ್ತು ಕೆ. ಕಾಮರಾಜ್‌ ಮಾರ್ಗ (ಪ್ಲಾಟ್‌ ನಂ.38) ನಡುವೆ ಇರುವ 9.5 ಎಕರೆ ಪ್ರದೇಶದ ನಿವೇಶನ ಹಾಗೂ ಡಾಲ್‌ಹೌಸಿ ರಸ್ತೆ ಮತ್ತು ಟು ಟು ರಸ್ತೆ ನಡುವೆ ಇರುವ ನಿವೇಶನವನ್ನು (ಪ್ಲಾಟ್‌ ನಂ.36) ಬದಲಾಯಿಸಲು ಉದ್ದೇಶಿಸಲಾಗಿದೆ. ಈ ಜಾಗದಲ್ಲಿ ಪ್ರಧಾನ ಮಂತ್ರಿ ಕಚೇರಿ ನಿರ್ಮಿಸುವ ಸಾಧ್ಯತೆ ಇದೆ.

ಈ ಬಗ್ಗೆ ಸಾರ್ವಜನಿಕರು 30 ದಿನಗಳ ಒಳಗೆ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ADVERTISEMENT

‘ಸೆಂಟ್ರಲ್‌ ವಿಸ್ತಾ’ ಯೋಜನೆ ಅನ್ವಯ ಹೊಸ ಸಂಸತ್‌ ಭವನ, ಕೇಂದ್ರೀಯ ಸಚಿವಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿಲೋ ಮೀಟರ್‌ ರಾಜಪಥ ಮಾರ್ಗವನ್ನು ಅಭಿವೃದ್ಧಿಪಡಿಸುವುದು, ಪ್ರಧಾನಮಂತ್ರಿಯ ಹೊಸ ನಿವಾಸ ಮತ್ತು ಪ್ರಧಾನಿ ಕಚೇರಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.