ನವದೆಹಲಿ: ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿಯಾದ ‘ಬಯೋಲಾಜಿಕಲ್-ಇ’ ಜೊತೆ ಕೋವಿಡ್–19ರ 30 ಕೋಟಿ ಲಸಿಕಾ ಡೋಸ್‌ಗಳನ್ನು ಕಾಯ್ದಿರಿಸುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಮುಂಗಡವಾಗಿ ₹1500 ಕೋಟಿಯನ್ನು ಕೇಂದ್ರ ಪಾವತಿಸಲಿದೆ.
ಈ ಲಸಿಕೆಯ ಡೋಸ್‌ಗಳನ್ನು ಈ ವರ್ಷದ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ‘ಬಯೋಲಾಜಿಕಲ್-ಇ’ ತಯಾರಿಸುತ್ತದೆ ಮತ್ತು ಸಂಗ್ರಹಿಸುತ್ತದೆ ಎಂದು ಗುರುವಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ಬಯೋಲಾಜಿಕಲ್-ಇ’ ಕಂಪನಿ ತಯಾರಿಸಿರುವ ಕೋವಿಡ್ ಲಸಿಕೆಯು ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ನೀಡಿದ್ದು, ಇದೀಗ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿದೆ.
ಇದು ‘ಆರ್‌ಬಿಡಿ ಪ್ರೋಟೀನ್ ಸಬ್ ಯುನಿಟ್’ ಲಸಿಕೆಯಾಗಿದ್ದು, ಮುಂದಿನ ಕೆಲ ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಕೋವಿಡ್ 19 ಲಸಿಕೆ ಸಂಬಂಧ ರಚಿಸಲಾಗಿರುವ ರಾಷ್ಟ್ರೀಯ ತಜ್ಞರ ಗುಂಪು ಈ ಲಸಿಕೆ ಕುರಿತು ಪರಿಶೀಲಿಸಿದ ಬಳಿಕ ‘ಬಯೋಲಾಜಿಕಲ್-ಇ’ ಕಂಪನಿಯ ಪ್ರಸ್ತಾವವದ ಅನುಮೋದನೆಗೆ ಶಿಫಾರಸು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.