ADVERTISEMENT

ಪಿಂಚಣಿ: ಕೇಂದ್ರಕ್ಕೆ 36,700 ದೂರು ಸಲ್ಲಿಕೆ

ಪಿಟಿಐ
Published 14 ಡಿಸೆಂಬರ್ 2022, 12:25 IST
Last Updated 14 ಡಿಸೆಂಬರ್ 2022, 12:25 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದಹೆಲಿ: ಈ ವರ್ಷದ ಏಪ್ರಿಲ್‌ನಿಂದ ಇಲ್ಲಿಲಿಯವರೆಗೆ ಪಿಂಚಣಿಗೆ ಸಂಬಂಧಿತ36,700 ಕುಂದುಕೊರತೆಗಳ ದೂರು ದಾಖಲಾಗಿವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಬುಧವಾರ ತಿಳಿಸಿದರು.

ತಡವಾಗಿ ಮತ್ತು ಸರಿಯಾಗಿ ಪಿಂಚಣಿ ಪಾವತಿಯಾಗದೇ ಇರುವ ಕುರಿತಾ ಹಾಗೂ ನಿವೃತ್ತಿ ವೇತನಕ್ಕೆ ಸಂಬಂಧಿಸಿದ11,891 ದೂರುಗಳು ಬಂದಿದ್ದರೆ, 3,803 ಪಿಂಚಣಿ ಪಾವತಿಯಾಗದೇ ಬಾಕಿ ಇರುವ ಬಗ್ಗೆ ದೂರುಗಳು ’ಕೇಂದ್ರೀಕೃತ ಪಿಂಚಣಿ ಕುಂದುಕೊರತೆಗಳ ಪರಿಹಾರ ಮತ್ತು ಮಾನಿಟರಿಂಗ್ ವ್ಯವಸ್ಥೆ’ಯಲ್ಲಿ ದಾಖಲಾಗಿವೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

2021–22ರಲ್ಲಿ62,874, 2020–21ರಲ್ಲಿ 49,788 ಹಾಗೂ 2019–20ರಲ್ಲಿ 39,684 ದೂರುಗಳು ದಾಖಲಾಗಿದ್ದವು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.