ADVERTISEMENT

ಕೆಮ್ಮು, ನೆಗಡಿ, ನೋವಿಗೆ ವೈದ್ಯರ ಚೀಟಿ ರಹಿತ ಔಷಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 14:14 IST
Last Updated 7 ಜೂನ್ 2022, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೆಮ್ಮು, ಶೀತ, ನೋವು ನಿವಾರಕ ಹಾಗೂ ಚರ್ಮದ ತುರಿಕೆ ಶಮನಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರಾಸಿಟಮಾಲ್, ಮೂಗಿನ ಡ್ರಾಪ್ಸ್‌ ಮತ್ತು ಫಂಗಸ್‌ ತಡೆಯುವ ಆ್ಯಂಟಿಬಯಾಟಿಕ್‌ ಸೇರಿ 16 ಸಾಮಾನ್ಯ ಔಷಧಗಳು ವೈದ್ಯರ ಚೀಟಿ ಇಲ್ಲದೇ ಇನ್ನು ಮುಂದೆ ಔಷಧಾಲಯಗಳಲ್ಲಿ ಲಭಿಸಲಿವೆ.

ಕೇಂದ್ರ ಆರೋಗ್ಯ ಸಚಿವಾಲಯವು 1945ರ ಔಷಧ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದೆ. ಅಂತಹ 16 ಔಷಧಗಳನ್ನು ಶೆಡ್ಯೂಲ್ ಕೆ ಅಡಿಯಲ್ಲಿ ತರಲು ವೈದ್ಯರ ಪ್ರಿಸ್ಕ್ರಿಪ್ಷನ್‌ಗೆ ವಿನಾಯಿತಿ ನೀಡುವ ಮೂಲಕ, ಅವುಗಳನ್ನು ಪರವಾನಗಿ ಮತ್ತು ಮಾನ್ಯತೆಯ ಚಿಲ್ಲರೆ ಔಷಧ ಮಾರಾಟಗಾರರು ‘ಓವರ್‌ –ದಿ-ಕೌಂಟರ್‌ (ಒಟಿಸಿ)’ ವರ್ಗದಲ್ಲಿ ಮಾರಾಟ ಮಾಡಬಹುದಾಗಿದೆ.

ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ ಕೋರಿ ಆರೋಗ್ಯ ಸಚಿವಾಲಯಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.