ADVERTISEMENT

ಜಮ್ಮು–ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡಲು ಕೇಂದ್ರವೇ ಹೊಣೆ: ಮೆಹಬೂಬಾ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 12:48 IST
Last Updated 8 ಅಕ್ಟೋಬರ್ 2021, 12:48 IST
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ಕ್ರಮಗಳೇ ಕಾರಣ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಶುಕ್ರವಾರ ಆಪಾದಿಸಿದ್ದಾರೆ.

ಭಯೋತ್ಪಾದಕರಿಂದ ಹತ್ಯೆಗೀಡಾದ ಶಾಲೆಯ ಪ್ರಾಂಶುಪಾಲರ ಕುಟುಂಬವನ್ನು ಭೇಟಿ ಮಾಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ನಗರದ ಸರ್ಕಾರಿ ಶಾಲೆಯೊಳಗೆ ಪ್ರಾಂಶುಪಾಲರಾದ ಸುಪಿಂದರ್ ಕೌರ್ ಮತ್ತು ಶಿಕ್ಷಕ ದೀಪಕ್ ಚಂದ್ ಅವರನ್ನು ಉಗ್ರರು ಗುಂಡಿಕ್ಕಿ ಗುರುವಾರ ಹತ್ಯೆ ಮಾಡಿದ್ದರು.

ADVERTISEMENT

‘ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆ. ಕಾಶ್ಮೀರದಲ್ಲಿ 2019ರ ಆಗಸ್ಟ್ 5ರಿಂದ (370ನೇ ವಿಧಿ ರದ್ದು ಮಾಡಿದ ದಿನ) ಮತ್ತು ಅದಕ್ಕೂ ಮೊದಲು ವೇಗವಾಗಿ ಹದಗೆಡುತ್ತಿರುವ ಪರಿಸ್ಥಿತಿಗೆ ನೇರವಾಗಿ ಬಿಜೆಪಿ ಸರ್ಕಾರವೇ ಕಾರಣ’ ಎಂದು ಮೆಹಬೂಬಾ ಅವರು ಕೌರ್‌ ಅವರ ಅಲೂಚಿಬಾಗ್ ನಿವಾಸದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

‘ಕೌರ್‌ಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅವರು ಈಗ ಎಲ್ಲಿಗೆ ಹೋಗಬೇಕು? ನಮ್ಮ ಸಿಖ್ ಸಹೋದರರು ನಮ್ಮ ಜೊತೆಗಿದ್ದರು. ನಮ್ಮ ಕಷ್ಟದ ವರ್ಷಗಳಲ್ಲಿ ಇವರೆಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ. ಅವರ ಮೇಲೂ ಹಲ್ಲೆ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ’ ಎಂದು ಮೆಹಬೂಬಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.