ADVERTISEMENT

‘ಪಿಎಂ–ಇವಿದ್ಯಾ’ ಅಭಿಯಾನ: ಪ್ರತಿ ತರಗತಿಗೂ ಪ್ರತ್ಯೇಕ ಚಾನೆಲ್‌

ಡಿಜಿಟಲ್‌ ತಂತ್ರಜ್ಞಾನ ಬಳಸಿ ಶಿಕ್ಷಣ

ಏಜೆನ್ಸೀಸ್
Published 17 ಮೇ 2020, 19:30 IST
Last Updated 17 ಮೇ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಡಿಜಿಟಲ್‌ ಮಾಧ್ಯಮದ ಮೂಲಕ ಶಿಕ್ಷಣ ಪ್ರಸಾರ ಕಾರ್ಯಕ್ಕೆ ಒತ್ತು ನೀಡುವ ಸಂಬಂಧ ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ–ಇ ವಿದ್ಯಾ’ (ಪಿಎಂ–ಇವಿದ್ಯಾ) ಎಂಬ ಕಾರ್ಯಕ್ರಮವನ್ನು ಭಾನುವಾರ ಘೋಷಿಸಿದೆ.

ಈ ಉಪಕ್ರಮದಡಿ 1 ರಿಂದ 12ನೇ ತರಗತಿ ವರೆಗೆ, ಪ್ರತಿ ತರಗತಿಗೂ ಪ್ರತ್ಯೇಕ ಟಿ.ವಿ ಚಾನೆಲ್‌ ಆರಂಭಿಸುವುದಾಗಿ ಪ್ರಕಟಿಸಿದೆ.

ಕೋವಿಡ್‌–19ನಿಂದಾಗಿ ಕುಸಿದಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಂಬಂಧ 5ನೇ ಕಂತಿನ ವಿವರಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಮಾಹಿತಿ ನೀಡಿದರು.

ADVERTISEMENT

‘ಶಿಕ್ಷಣ ಪ್ರಸಾರಕ್ಕಾಗಿ 12 ಚಾನೆಲ್‌ಗಳನ್ನು ಡಿಟಿಎಚ್‌ ಸೇವೆಗೆ ಸೇರ್ಪಡೆ ಮಾಡಲಾಗುವುದು.ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಸಂಬಂಧ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ನೆರವು ನೀಡಲು ಮನೋದರ್ಪಣ ಎಂಬ ಕಾರ್ಯಕ್ರಮಕ್ಕೆ ಶೀಘ್ರ ಚಾಲನೆ ನೀಡಲಾಗುವುದು’ ಎಂದರು.

‘ಡಿಜಿಟಲ್‌ ಇನ್‌ಫ್ರಾಸ್ಟ್ರಕ್ಚರ್‌ ಫಾರ್‌ ನಾಲೆಜ್‌ ಶೇರಿಂಗ್‌’ (ಡಿಐಕೆಎಸ್‌ಎಚ್‌ಎ– ದೀಕ್ಷಾ) ಎಂಬ ಆ್ಯಪ್‌ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ನಿಂದ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಪಾಠಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.